Asianet Suvarna News Asianet Suvarna News

ಮೋದಿ ಆರ್ಥಿಕತೆಗೆ ವಿಶ್ವ ಬ್ಯಾಂಕ್ ಭೇಷ್

190 ಉದ್ಯಮಸ್ನೇಹಿ ದೇಶಗಳ ಪಟ್ಟಿ ಪ್ರಕಟ | ಭಾರತ 130ರಿಂದ 100ನೇ ಸ್ಥಾನಕ್ಕೆ ಐತಿಹಾಸಿಕ ಏರಿ

Modi Economic Policies Get Thumbs Up From World Bank

ನವದೆಹಲಿ: ಉದ್ಯಮ ಸ್ನೇಹಿ ವಾತಾವರಣ ಹೊಂದಿರುವ ವಿಶ್ವದ 190 ರಾಷ್ಟ್ರಗಳ ಪಟ್ಟಿಯೊಂದನ್ನು ವಿಶ್ವ ಬ್ಯಾಂಕ್ ಮಂಗಳವಾರ ಪ್ರಕಟಿಸಿದ್ದು, ಅದರಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ.

ಕಳೆದ ವರ್ಷದ ಪಟ್ಟಿಯಲ್ಲಿ 130ನೇ ಸ್ಥಾನ ಪಡೆದಿದ್ದ ಭಾರತ ಒಂದೇ ವರ್ಷದಲ್ಲಿ 30 ಸ್ಥಾನ ಏರಿಕೆ ಕಾಣುವ ಮೂಲಕ 100ನೇ ಸ್ಥಾನ ತಲುಪಿವೆ. ಈ ಮೂಲಕ ಮೊದಲ ಬಾರಿಗೆ ಟಾಪ್ 100ರಲ್ಲಿ ಸ್ಥಾನ ಪಡೆದಿದೆ.

ಜಿಎಸ್‌ಟಿ, ಅಪನಗದೀಕರಣದಂಥ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದ್ದಕ್ಕಾಗಿ ವಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ, ವಿಶ್ವಸಂಸ್ಥೆ ವರದಿ ಹೊಸ ಟಾನಿಕ್ ನೀಡಿದಂತಾಗಿದೆ.

ಭಾರತ ನೀಡುವ ಆರ್ಥಿಕ ಅವಕಾಶಗಳನ್ನು ಬಳಸಿಕೊಳ್ಳಲು ನಾವು ಇಡೀ ವಿಶ್ವವನ್ನು ಆಹ್ವಾನಿಸುತ್ತಿದ್ದೇವೆ. ಭಾರತದಲ್ಲಿ ಉದ್ಯಮ ನಡೆಸುವುದು ಹಿಂದೆಂದೂ ಇಷ್ಟು ಸುಲಭವಿರಲಿಲ್ಲ. ಕಳೆದ 3 ವರ್ಷಗಳಲ್ಲಿ ರಾಜ್ಯಗಳ ನಡುವಿನ ಸೌಹಾರ್ದ ಸ್ಪರ್ಧೆ, ಇಂಥದ್ದೊಂದು ಸಾಧನೆಗೆ ಕಾರಣವಾಗಿದೆ.

ನರೇಂದ್ರ ಮೋದಿ, ಪ್ರಧಾನಿ

ಜೊತೆಗೆ ಸರ್ಕಾರದ ಸುಧಾರಣಾ ಕ್ರಮಗಳಿಗೆ ವಿಶ್ವಬ್ಯಾಂಕ್ ನೀಡಿರುವ ಶಹಬ್ಬಾಸ್‌ಗಿರಿ, ಮುಂದೆ ಇನ್ನಷ್ಟು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲು ರಹದಾರಿ ಮಾಡಿಕೊಡಲಿದೆ ಎಂದು ಬಣ್ಣಿಸಲಾಗಿದೆ.

ವರದಿ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ವಿವಿಧ ವಲಯಗಳಲ್ಲಿ ಟೀಂ ಇಂಡಿಯಾ ಕೈಗೊಂಡ ಸರ್ವಾಂಗೀಣ ಸುಧಾರಣ ಕ್ರಮಗಳ ಫಲವಾಗಿ ಉದ್ಯಮ ಸ್ನೇಹಿ ವಾತಾವರಣ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಐತಿಹಾಸಿಕ ಏರಿಕೆ ಕಾಣುವಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಇನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಕೂಡ, ಇದು ಕೇಂದ್ರ ಸರ್ಕಾರದ ಸುಧಾರಣಾ ಕ್ರಮಗಳಿಗೆ ಸಿಕ್ಕ ಗೆಲುವು ಎಂದು ಬಣ್ಣಿಸಿದ್ದಾರೆ.

 

 

Follow Us:
Download App:
  • android
  • ios