ಪ್ರತಿಪಕ್ಷಗಳ ಗೊಂದಲದ ನಡುವೆಯೇ ಪ್ರಧಾನಿ ಮೋದಿ ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಮಾಡಿದ್ದು, ಖರ್ಗೆ ಅವರು ಹೇಳಿದ ಬಷೀರ್ ಬದರ್ ಶಾಹಿರಿಯೊಂದಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನವದೆಹಲಿ: ಪ್ರತಿಪಕ್ಷಗಳ ಗೊಂದಲದ ನಡುವೆಯೇ ಪ್ರಧಾನಿ ಮೋದಿ, ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸಿದ್ದು, ಬಷೀರ್ ಬದರ್ ಶಾಹಿರಿಯೊಂದಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಟಾಂಗ್ ನೀಡಿದ ಪ್ರಧಾನಿ, ತಮ್ಮ ಭಾಷಣವನ್ನು ಅವರು ಕೇಳಿಸಿಕೊಳ್ಳುತ್ತಿರಬಹುದು ಎಂದು ಹೇಳುವ ಮೂಲಕ, ಸಿದ್ದರಾಮಯ್ಯ ಅವರು ಇತ್ತೀಚೆಗೆ ಮೋದಿಗೆ ಹಾಕಿರುವ ಸವಾಲುಗಳಿಗೆ ಉತ್ತರಿಸಲು ಯತ್ನಿಸಿದರು.
ಕಾಂಗ್ರೆಸ್ ಮಾಡಿದ ಕೆಲಸಗಳಿಂದ ದೇಶದ ಜನತೆ ಅನುಭವಿಸುತ್ತಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರು ಉತ್ತರಖಾಂಡ, ಜಾರ್ಖಂಡ್ ಮತ್ತು ಛತ್ತೀಸ್‌ಗಡ್ ರಾಜ್ಯಗಳ ಉದಯವಾದಾಗ ನಡೆದುಕೊಂಡು ರೀತಿಯನ್ನು ನೆನಪಿಸಿಕೊಳ್ಳುತ್ತೇವೆ. ಅವುಗಳ ಏಳ್ಗೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅವರು ಮುನ್ನುಡಿ ಹಾಕಿ ಕೊಟ್ಟರು,' ಎಂದರು.
'ದಶಕಗಳಿಂದೂ ಒಂದು ಪಕ್ಷ ತನ್ನೆಲ್ಲಾ ಶಕ್ತಿ, ಸಾಮರ್ಥ್ಯವನ್ನೂ ಒಂದೇ ಕುಟುಂಬದ ಸೇವೆ ಮಾಡಲು ವಿನಿಯೋಗಿಸಿದೆ. ಒಂದೇ ಒಂದು ಕುಟುಂಬದ ಉದ್ಧಾರಕ್ಕಾಗಿ ಇಡೀ ದೇಶದ ಅಬಿವೃದ್ಧಿಯನ್ನೇ ಪಣಕ್ಕಿಡಲಾಗಿತ್ತು,' ಎನ್ನುವ ಮೂಲಕ ಗಾಂಧಿ ಕುಟುಂಬಕ್ಕೆ ಮೋದಿ ಟಾಂಗ್ ನೀಡಿದರು.
'ಸುಳ್ಳು ಭಾಷಣವನ್ನು ನಿಲ್ಲಿಸಿ,' ಎಂದು ಪ್ರತಿಪಕ್ಷಗಳ ಕೂಗಾಟದ ನಡುವೆಯೇ ಭಾಷಣ ಮುಂದುವರಿಸಿದ ಮೋದಿ, 'ದೇಶವನ್ನು ಕಾಂಗ್ರೆಸ್ ಒಡೆದು, ಆಳಿದೆ. ಕಾಂಗ್ರೆಸ್ ಪ್ರಜಾಪ್ರಭುತ್ವ ವಿರೋಧಿ, ಎಂದು ಹೇಳಿದರು.
'ಕಾಂಗ್ರೆಸ್ಸಿನಿಂದಲೇ ಭಾರತದ ಪ್ರಗತಿ ಕುಂಠಿತಗೊಂಡಿದ್ದು, ಭಾರತೀಯರ ಭಾವನೆಗಳ ಜತೆ ಆಟವಾಡಿದೆ, ' ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಗಿದ ನಂತರ, ಬಜೆಟ್ ಭಾಷಣವನ್ನು ಪ್ರಧಾನಿ ಆರಂಭಿಸಿದರು.
