ಜನಪ್ರಿಯ ವಿಶ್ವ ನಾಯಕರಲ್ಲಿ ಮೋದಿ ನಂ.3

Modi Become 3rd Most Popular Leader
Highlights

ಗ್ಯಾಲಪ್ ಇಂಟರ್‌ನ್ಯಾಶನಲ್ ಸಂಸ್ಥೆ ನಡೆಸಿದ ಜನಪ್ರಿಯ ಜಾಗತಿಕ ನಾಯಕರ ಸಮೀಕ್ಷೆ

ನವದೆಹಲಿ: ಗ್ಯಾಲಪ್ ಇಂಟರ್‌ನ್ಯಾಶನಲ್ ಸಂಸ್ಥೆ ನಡೆಸಿದ ಜನಪ್ರಿಯ ಜಾಗತಿಕ ನಾಯಕರ ಸಮೀಕ್ಷೆಯಲ್ಲಿ, ಪ್ರಧಾನಿ ಮೋದಿ 3ನೇ ಸ್ಥಾನ ಪಡೆದಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದ ಅಧ್ಯಕ್ಷ ಜಿನ್‌ಪಿಂಗ್‌ರನ್ನೂ ಹಿಂದಿಕ್ಕಿರುವ ಮೋದಿ, ಜಾಗತಿಕ ಸಮೀಕ್ಷೆಯಲ್ಲಿ ಗಮನ ಸೆಳೆದಿದ್ದಾರೆ.

ಜಗತ್ತಿನ ಜನಪ್ರಿಯ ನಾಯಕರಲ್ಲಿ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಮೊದಲ ಸ್ಥಾನದಲ್ಲಿದ್ದರೆ, ಫ್ರಾನ್ಸ್‌ನ ನೂತನ ಪ್ರಧಾನಿ ಎಮ್ಯಾನುವೆಲ್ ಮ್ಯಾಕ್ರನ್ ಎರಡನೇ ಸ್ಥಾನದಲ್ಲಿದ್ದಾರೆ.

ನಾಲ್ಕನೇ ಸ್ಥಾನದಲ್ಲಿ ಬ್ರಿಟನ್ ಪ್ರಧಾನಿ ಥೆರೆಸಾ ಮೇ, ಐದನೇ ಸ್ಥಾನದಲ್ಲಿ ಜಿನ್‌ಪಿಂಗ್, ಆರನೇ ಸ್ಥಾನದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇದ್ದಾರೆ.

ಅಮೆರಿಕಾ ಅಧ್ಯಕ್ಷ ಟ್ರಂಪ್ 11ನೇ ಸ್ಥಾನದಲ್ಲಿದ್ದಾರೆ.

loader