ನವೆಂಬರ್ 8ರಿಂದ ಡಿಸೆಂಬರ್ 31ರವರೆಗೆ ತಮ್ಮ ಬ್ಯಾಂಕ್ ಖಾತೆಗಳ ಎಲ್ಲ ವಹಿವಾಟಿನ ವಿವರ ನೀಡಬೇಕೆಂದು ಬಿಜೆಪಿಯ ಎಲ್ಲ ಸಂಸದರು ಹಾಗೂ ಶಾಸಕರಿಗೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ.
ನವದೆಹಲಿ(ನ. 29): ನೋಟ್ ಬ್ಯಾನ್ ಮಾಡಿ ಕಾಳಧನಿಕರ ಮೇಲೆ ಪ್ರಹಾರ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಸ್ವಪಕ್ಷೀಯರಿಗೂ ಶಾಕ್ ಕೊಟ್ಟಿದ್ದಾರೆ. ನೋಟ್ ನಿಷೇಧ ಪ್ರಕಟವಾದ ನವೆಂಬರ್ 8ರಿಂದ ಡಿಸೆಂಬರ್ 31ರವರೆಗೆ ತಮ್ಮ ಬ್ಯಾಂಕ್ ಖಾತೆಗಳ ಎಲ್ಲ ವಹಿವಾಟಿನ ವಿವರ ನೀಡಬೇಕೆಂದು ಬಿಜೆಪಿಯ ಎಲ್ಲ ಸಂಸದರು ಹಾಗೂ ಶಾಸಕರಿಗೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಜನವರಿ 2ರಷ್ಟರಲ್ಲಿ ಅಮಿತ್ ಶಾ ಬಳಿ ಈ ವಿವರ ಸಲ್ಲಿಸಬೇಕೆಂದು ಮೋದಿ ಆದೇಶಿಸಿದ್ದಾರೆ.
ನವೆಂಬರ್ 8ರಂದು ಪ್ರಧಾನಿ ಮೋದಿಯವರು 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ನಿರ್ಧಾರ ಘೋಷಣೆ ಮಾಡಿದ್ದರು. ಯಾವುದೇ ಪೂರ್ವಭಾವಿ ತಯಾರಿ ಇಲ್ಲದೆಯೇ ದಿಢೀರ್ ನೋಟ್ ನಿಷೇಧಿಸಿ ಜನಸಾಮಾನ್ಯರಿಗೆ ತೊಂದರೆ ನೀಡಲಾಗುತ್ತಿದೆ ಎಂಬುದು ವಿಪಕ್ಷಗಳ ಆಪಾದನೆಯಾಗಿದೆ. ಜೊತೆಗೆ, ನೋಟ್ ಬ್ಯಾನ್ ಕ್ರಮ ಘೋಷಣೆ ಮಾಡುವ ಸಾಕಷ್ಟು ಮುಂಚಿತವಾಗಿ ಬಿಜೆಪಿ ಹಾಗೂ ಆಪ್ತರಿಗೆ ಕಪ್ಪು ಹಣ ಬಿಳಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು ಎಂಬುದೂ ವಿರೋಧಿಗಳ ಆರೋಪವಾಗಿದೆ.
