ಪ್ರಧಾನಿ ಮೋದಿಯವರ ಆ್ಯಪ್‌ನಲ್ಲಿ ಅಶ್ಲೀಲ ಅಥವಾ ನಿಂದನಾತ್ಮಕ ಪೋಸ್ಟ್‌ಗಳನ್ನು ಮಾಡಲಾಗಿಲ್ಲ. ಬದಲಿಗೆ ಈ ಆ್ಯಪ್ ಬಳಕೆದಾರರ ದತ್ತಾಂಶಗಳ ಭದ್ರತೆ ಬಗ್ಗೆ ಯುವ ಹ್ಯಾಕರ್ ಗಮನ ಸೆಳೆದಿದ್ದಾರೆ.

ನವದೆಹಲಿ(ಡಿ.3): ಪ್ರಧಾನಿ ನರೇಂದ್ರ ಮೋದಿ ಖ್ಯಾತಿಯ ಆ್ಯಪ್‌ಗೆ ಕೂಡ ಕನ್ನ ಹಾಕಲಾಗಿದ್ದು, ಗಂಭೀರ ಭದ್ರತೆ ಅಪಾಯಕ್ಕೊಳಗಾಗಿದೆ ಎಂದು ‘ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಭಿನ್ನತೆ ಏನೆಂದರೆ, ಪ್ರಧಾನಿ ಮೋದಿಯವರ ಆ್ಯಪ್‌ನಲ್ಲಿ ಅಶ್ಲೀಲ ಅಥವಾ ನಿಂದನಾತ್ಮಕ ಪೋಸ್ಟ್‌ಗಳನ್ನು ಮಾಡಲಾಗಿಲ್ಲ. ಬದಲಿಗೆ ಈ ಆ್ಯಪ್ ಬಳಕೆದಾರರ ದತ್ತಾಂಶಗಳ ಭದ್ರತೆ ಬಗ್ಗೆ ಯುವ ಹ್ಯಾಕರ್ ಗಮನ ಸೆಳೆದಿದ್ದಾರೆ.

ಮುಂಬೈಯ ಮೊಬೈಲ್ ಆ್ಯಪ್ ಅಭಿವೃದ್ಧಿಕಾರ ಜಾವೇದ್ ಖತ್ರಿ (22) ಎಂಬವರು ‘ಯುವರ್‌ಸ್ಟೋರಿಡಾಟ್‌ಕಾಂ’ನ್ನು ಇ-ಮೇಲ್ ಮೂಲಕ ಸಂಪರ್ಕಿಸಿ, ತಾವು ನರೇಂದ್ರ ಮೋದಿ ಆ್ಯಪ್ ಅನ್ನು ಹ್ಯಾಕ್ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಆ್ಯಪ್‌ಗೆ ಕನ್ನ ಹಾಕಲು ತಮಗೆ ಕೇವಲ 15-20 ನಿಮಿಷಗಳು ಬೇಕಾದವು. ಆ್ಯಪ್‌ನಲ್ಲಿ ಹಲವು ಹಂತದ ಭದ್ರತಾ ವಲಯಗಳಿವೆ. ಆದರೆ ಅದರಲ್ಲಿರುವ ಕೆಲವು ಲೋಪಗಳನ್ನು ಬಳಸಿಕೊಂಡು ಸುಲಭವಾಗಿ ಇದನ್ನು ಸಾಸಿದೆ ಎಂದು ಖತ್ರಿ ತಿಳಿಸಿದ್ದಾರೆ.