ಬಿಜಿಂಗ್(ಜೂ.09): ಕಿರ್ಗಿಸ್ತಾನದ ಬಿಷ್ಕೇಕ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ (SCO) ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿಯಾಗಲಿದ್ದಾರೆ. 

ಇದೇ ಜೂ.12 ರಿಂದ 16 ರವರೆಗೆ ಕಿರ್ಗಿಸ್ತಾನ್ ಮತ್ತು ತಜಾಕಿಸ್ತಾನಕ್ಕೆ ಚೀನಾ ಅಧ್ಯಕ್ಷ ಕ್ಸಿ ಭೇಟಿ ನೀಡಲಿದ್ದು, ದ್ದಾರೆ ಎಂದು ಚೀನಾ SCO ಶೃಂಗಸಭೆ ಜೂ.13-14ರಂದು ನಡೆಯಲಿದೆ.

ಭಾರತದ ಪ್ರಧಾನಿ ಮೋದಿ ಕೂಡ ಶೃಂಗಸಭೆಯಲ್ಲಿ ಭಾಗವಹಿಸಲಿದ್ದು, ಎರಡನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಚೀನಾ ಅಧ್ಯಕ್ಷರನ್ನು ಭೇಟಿ ಮಾಡಲಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಚೀನಾದ ಭಾರತೀಯ ರಾಯಭಾರಿ ವಿಕ್ರಮ್ ಮಿಸ್ರಿ, SCO ಶೃಂಗಸಭೆಯಲ್ಲಿ ಮೋದಿ-ಕ್ಸಿ ಭೇಟಿಯಾಗುತ್ತಿರುವುದನ್ನು ಖಚಿತಪಡಿಸಿದ್ದಾರೆ.

SCO ಚೀನಾ ನೇತೃತ್ವದ ಎಂಟು ಸದಸ್ಯ ರಾಷ್ಟ್ರಗಳ ಆರ್ಥಿಕ ಮತ್ತು ಭದ್ರತಾ ಸಂಘಟನೆಯಾಗಿದ್ದು ಭಾರತ ಮತ್ತು ಪಾಕಿಸ್ತಾನ 2017ರಿಂದ ಈ ಸಂಘಟನೆಯ ಸದಸ್ಯ ರಾಷ್ಟ್ರಗಳಾಗಿದೆ.