ಪೊಲೀಸರು ಕರ್ತವ್ಯದಲ್ಲಿ ಇದ್ದ ವೇಳೆ ಮೊಬೈಲ್ ಬಳಕೆ ಮಾಡದಂತೆ  ಪೊಲೀಸ್ ಇಲಾಖೆ ನಿಷೇಧ ಹೇರಿದೆ.  ಸಬ್‌ಇನ್‌ಸ್ಪೆಕ್ಟರ್ ರ್ಯಾಕ್ ಗಿಂತ ಕಡಿಮೆ ದರ್ಜೆ ಹೊಂದಿದ ಪೊಲೀಸರಿಗೆ ಈ ನಿಯಮ ಅನ್ವಯವಾಗಲಿದೆ.

ಚೆನ್ನೈ: ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗಬಹು ದು ಎಂಬ ಕಾರಣಕ್ಕೆ ಸಬ್‌ಇನ್‌ಸ್ಪೆಕ್ಟರ್ ರ್ಯಾಕ್ ಗಿಂತ ಕಡಿಮೆ ದರ್ಜೆ ಹೊಂದಿದ ಪೊಲೀಸರು ಕರ್ತವ್ಯ ನಿರ್ವಹಣೆ ವೇಳೆ ಮೊಬೈಲ್ ಬಳಸದಂತೆ ತಮಿಳುನಾಡು ಪೊಲೀಸ್ ಇಲಾಖೆ ನಿಷೇಧ ಹೇರಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಸುತ್ತೋಲೆ ಹೊರಡಿಸಿದ ತಮಿಳುನಾಡು ಡಿಜಿಪಿ ಕಚೇರಿ, ‘ಮುಖ್ಯವಾದ ಭದ್ರತಾ ಕರ್ತವ್ಯ ನಿರ್ವಹಣೆ ವೇಳೆಯೇ ಪೊಲೀಸರು ಮೊಬೈಲ್ ಫೋನ್ ಬಳಸಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. 

ಜೊತೆಗೆ ಉನ್ನತ ಪೊಲೀಸ್ ಅಧಿಕಾರಿಗಳು, ಅಧಿಕೃತ ಕೆಲಸಕ್ಕಾಗಿ ಅಷ್ಟೇ ಮೊಬೈಲ್ ಬಳಕೆ ಮಾಡಬಹುದು,’ ಎಂದು ಹೇಳಿದೆ.