(Video) ಮಂಡ್ಯದ ಶೋರೂಮ್'ನಲ್ಲೇ ನೋಡನೋಡುತ್ತಿದ್ದಂತೆ ಬ್ಲ್ಯಾಸ್ಟ್ ಆದ ಮೊಬೈಲ್
ಮಂಡ್ಯ(ಸೆ.16): ತಾಂತ್ರಿಕ ದೋಷ ಹಿನ್ನಲೆ ಕಾರಣದಿಂದ ಮೊಬೈಲ್ ಶೋರೂಮ್'ನಲ್ಲೇ ಸ್ಫೋಟಗೊಂಡಿರುವ ಘಟನೆ ಮಂಡ್ಯ ನಗರದ ಆರ್.ಪಿ. ರಸ್ತೆಯಲ್ಲಿ ನಡೆದಿದೆ.
ರೆಡ್ ಮಿ ಕಂಪನಿಯ ನೋಟ್ 4 ಸೀರಿಸ್'ನ ಮೊಬೈಲ್ ಗ್ರಾಹಕರು ಹಾಗೂ ಸಿಬ್ಬಂದಿಯ ಎದುರುಗಡೆಯೇ ನೋಡನೋಡುತ್ತಿದ್ದಂತೆ ಬ್ಲ್ಯಾಸ್ಟ್ ಆಗಿದೆ. ಈ ಮೊಬೈಲ್'ಅನ್ನು ಗ್ರಾಹಕರೊಬ್ಬರು ಆನ್'ಲೈನ್'ನಲ್ಲಿ ಶೋರೂಂ ಮೂಲಕ ತರಿಸಿದ್ದರು. ಸ್ಫೋಟಗೊಂಡ ದೃಶ್ಯ ಎಲ್ಲಡೆ ವೈರಲ್ ಆಗಿದೆ.
