ಹೀಗೆ ಮೊಬೈಲ್ವೊಂದು ಬ್ಲಾಸ್ ಆದ ಪರಿಣಾಮ ಆಸ್ಪತ್ರೆಗೆ ದಾಖಲಾಗಿರೋ ಯುವಕ, ಯುವಕನಿಗೆ ಚಿಕಿತ್ಸೆ ನೀಡಿರೋ ವೈದ್ಯರು, ಇದರ ಮಧ್ಯೆ ಆತಂಕದಲ್ಲಿರೋ
ವಿದೇಶದಲ್ಲೂ, ದೇಶದ ಬೇರೆ ಭಾಗದಲ್ಲಿ ಮೊಬೈಲ್ ಬ್ಲ್ಯಾಸ್ಟ್ ಆದ ಸುದ್ದಿ ಕೇಳುತ್ತಿರುತ್ತೇವೆ. ಆದರೆ ಈಗ ಕರ್ನಾಟಕದಲ್ಲೇ ಮೊಬೈಲ್ ಬ್ಲ್ಯಾಸ್ಟ್ ಆಗಿ ಯುವಕ ಆಸ್ಪತ್ರೆಗೆ ದಾಖಲಾಗಿದ್ದಾನೆ. ಸ್ಫೋಟಗೊಂಡ ಮೊಬೈಲ್ ವಿಶ್ವದಾದ್ಯಂತ ಎಲ್ಲರ ನಂಬಿಕೆಗೆ ಪಾತ್ರವಾದ ಸ್ಯಾಮ್'ಸಂಗ್ ಕಂಪನಿಯದ್ದು. ಮೊದಲೆಲ್ಲ ಮಾತನಾಡುವಾಗ,ಚಾರ್ಜ್'ಗಿಟ್ಟುರುವಾದ ಬ್ಲ್ಯಾಸ್ಟ್ ಆಗುತ್ತಿದ್ದ ಮೊಬೈಲ್ ಈಗ ಜೇಬಿನಲ್ಲೆ ಇಟ್ಟುಕೊಂಡಿದ್ದಾಗಲೆ ಸ್ಪೋಟಗೊಂಡಿದೆ. ಇದು ಘಟಿಸಿರುವುದು ನಮ್ಮ ಕರುನಾಡು ಬಾಗಲಕೋಟೆಯಲ್ಲಿ.
ಹೀಗೆ ಮೊಬೈಲ್ವೊಂದು ಬ್ಲಾಸ್ ಆದ ಪರಿಣಾಮ ಆಸ್ಪತ್ರೆಗೆ ದಾಖಲಾಗಿರೋ ಯುವಕ, ಯುವಕನಿಗೆ ಚಿಕಿತ್ಸೆ ನೀಡಿರೋ ವೈದ್ಯರು, ಇದರ ಮಧ್ಯೆ ಆತಂಕದಲ್ಲಿರೋ ಪಾಲಕರು. ಜಿಲ್ಲೆಯ ಗದ್ದನಕೇರಿ ಗ್ರಾಮದ ಸಿದ್ದಪ್ಪ ಅನಗವಾಡಿ ಎಂಬಾತ ಇಂದು ಬೆಳಿಗ್ಗೆ ಎಂದಿನಂತೆ ಕಚೇರಿ ಕೆಲಸಕ್ಕೆಂದು ತೆರಳುವ ಸಿದ್ದತೆಯಲ್ಲಿರುವಾಗ ಪ್ಯಾಂಟ್ನಲ್ಲಿ ಮೊಬೈಲ್ ಇರಿಸಿಕೊಂಡಿದ್ಧಾನೆ, ಈ ವೇಳೆ ಪ್ಯಾಂಟ್ ಜೇಬಿನಿಂದ ಏಕಾಏಕಿ ಸ್ಪಾರ್ಕ್ ಆಗ್ತಿರೋ ಶಬ್ದ ಬರುತ್ತಿರುವಾಗಲೇ ಏನಾಯಿತು ಎಂದು ನೋಡುವಷ್ಟರಲ್ಲಿ ತಕ್ಷಣ ಮೊಬೈಲ್ ಬ್ಲಾಸ್ಟ ಆಗಿದೆ. ಇದ್ರಿಂದ ತೊಡೆಗೆ ಗಾಯವಾಗಿದ್ದು, ಬಾಗಲಕೋಟೆಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ಮಧ್ಯೆ ಘಟನೆಯಿಂದ ಪಾಲಕರಲ್ಲಿ ಆತಂಕ ಮೂಡಿದ್ದು, ಮೊಬೈಲ್ ಕಂಡ್ರೆ ಸಾಕು ಭಯಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಮೊಬೈಲ್ ಪ್ರತಿಷ್ಠಿತ ಸ್ಯಾಮಸಂಗ್ ಕಂಪನಿಯದಾಗಿದ್ದು, ಕಳೆದ 3 ವರ್ಷದ ಹಿಂದೆ ಖರೀದಿ ಮಾಡಿದ್ದು ಎನ್ನಲಾಗಿದೆ. ಅಲ್ಲದೆ ಮೊಬೈಲ್ ಸಹ ಕೇವಲ 50 ಪರ್ಸೆಂಟ್ ಮಾತ್ರ ಚಾರ್ಜ್ ಆಗಿತ್ತು, ಹೀಗಿರುವಾಗ ಏಕಾಏಕಿ ಈ ರೀತಿ ಮೊಬೈಲ್ ಬ್ಲಾಸ್ಟ್ ಆಗಿದ್ದು ಮನೆಮಂದಿಯನ್ನ ಗಾಬರಿಗೊಳ್ಳುವಂತೆ ಮಾಡಿದೆ. ಅಲ್ಲದೆ ಕಂಪನಿಯ ಅಂಗಡಿಗೆ ವಿಚಾರಿಸಲು ಮುಂದಾಗಿದ್ದು, ಕೇಸ್ ಕೂಡ ದಾಖಲಿಸಲು ಸಿದ್ದಪ್ಪ ಮನೆ ಮಂದಿ ನಿರ್ಧರಿಸಿದ್ದಾರೆ.
ಒಟ್ಟಿನಲ್ಲಿ ಹೊಸ ಹೊಸ ಮೊಬೈಲ್ ಬಗ್ಗೆ ಕ್ರೇಜ್ಇಟ್ಟುಕೊಂಡು ಓಡಾಡುವ ಹುಡುಗರಿರುವಾಗ ಈ ರೀತಿ ಮೊಬೈಲ್ ಬ್ಲಾಸ್ಟ್ ಆಗಿರೋದು ಜನರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಒಟ್ಟಾರೆ ಮೊಬೈಲ್ ಬಗ್ಗೆ ಜಾಗೃತಿಯಿಂದ ಇರಬೇಕು ಅನ್ನೋದು ಮಾತ್ರ ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾದಂತಾಗಿದೆ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಸುವರ್ಣನ್ಯೂಸ್.
