Asianet Suvarna News Asianet Suvarna News

ಪುಟ್ಟಣ್ಣನ ಸ್ಥಿತಿ ಅತಂತ್ರ : ಜೆಡಿಎಸ್' ಸೇರಿ ತೊಡೆ ತಟ್ಟಲು ಸಿದ್ದರಾದ ಎ.ಮಂಜು

ಅದೇ ರಾಜಕೀಯ ಚಾಣಾಕ್ಷತನದೊಂದಿಗೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಜಿಲ್ಲಾ ನಾಯಕರಾಗಿ ಹೊರಹೊಮ್ಮುವ ಅವಕಾಶಗಳಿವೆ.

MLC Puttanna Next Political Terget

ಮಾಗಡಿ(ಆ.18): ಜೆಡಿಎಸ್ ನ ಬಂಡಾಯ ಶಾಸಕರು ಕಾಂಗ್ರೆಸ್ ಸೇರ್ಪಡೆಗೊಳ್ಳುವುದು ಖಚಿತವಾಗುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅತಂತ್ರರಾಗಿದ್ದಾರೆ. ಜೆಡಿಎಸ್ ವರಿಷ್ಠ ವಿರುದ್ಧ ಬಹಿರಂಗವಾಗಿಯೇ ಟೀಕೆ ಮಾಡಿ ಪಕ್ಷದಿಂದ ದೂರ ಸರಿದಿರುವ ಪುಟ್ಟಣ್ಣ, ಭಿನ್ನಮತೀಯ ಶಾಸಕರ ಗುಂಪಿನಲ್ಲಿ ಕಾಣಿಸಿಕೊಂಡಿದ್ದರು. ಭಿನ್ನಮತೀಯ ಶಾಸಕರು ವರಿಷ್ಠರೊಂದಿಗೆ ಚರ್ಚಿಸಿ ಕಾಂಗ್ರೆಸ್ ಸೇರುವ ದಾರಿಯನ್ನು ಸುಗಮ ಮಾಡಿಕೊಂಡರು.

ಆದರೆ, ಪುಟ್ಟಣ್ಣ ಮಾತ್ರ ಕಾಂಗ್ರೆಸ್ ಮತ್ತು ಬಿಜೆಪಿ ಪೈಕಿ ಯಾವ ಪಕ್ಷಕ್ಕೆ ಸೇರಿದರೆ ಒಳಿತು ಎಂಬ ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ. ಮೂಲಗಳ ಪ್ರಕಾರ ಪುಟ್ಟಣ್ಣ ಬಿಜೆಪಿ ಸೇರಿ ವಿಧಾನಸಭೆ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ ಎನ್ನಲಾಗುತ್ತಿದೆ. ಅದೇ ರಾಜಕೀಯ ಚಾಣಾಕ್ಷತನದೊಂದಿಗೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಜಿಲ್ಲಾ ನಾಯಕರಾಗಿ ಹೊರಹೊಮ್ಮುವ ಅವಕಾಶಗಳಿವೆ.

ಜೆಡಿಎಸ್' ಸೇರಿ ತೊಡೆ ತಟ್ಟಲು ಸಿದ್ದರಾದ ಎ.ಮಂಜು

ಇನ್ನು ಸದ್ಯಕ್ಕೆ ಕಾಂಗ್ರೆಸ್ ನಲ್ಲಿಯೇ ಇರುವ ಜಿಪಂ ಸದಸ್ಯ ಎ.ಮಂಜು ಜೆಡಿಎಸ್ ಸೇರಿ ತೊಡೆ ತಟ್ಟಲು ಸಿದ್ಧರಾಗುತ್ತಿದ್ದಾರೆ. ಕಾಂಗ್ರೆಸ್‌ನ್ನು ಅಧಿಕೃತವಾಗಿ ಸೇರ್ಪಡೆಗೊಳ್ಳುವ ಮುನ್ನವೇ ಬಾಲಕೃಷ್ಣ ಪಕ್ಷದ ಹಿರಿಯ ಮುಖಂಡರನ್ನು ಭೇಟಿಯಾಗಿ ಮಾತುಕತೆ ಕೂಡ ನಡೆಸಿದ್ದರು. ಇದೀಗ ವರಿಷ್ಠರಿಂದಲೇ ಗ್ರೀನ್ ಸಿಗ್ನಲ್ ಸಿಕ್ಕಿರುವುದರಿಂದ ಕ್ಷೇತ್ರದಲ್ಲಿ ತಮ್ಮ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳಲು ಮುಂದಾಗಿದ್ದಾರೆ.

Follow Us:
Download App:
  • android
  • ios