ಶಿಗ್ಗಾಂವ್ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಗೆಲ್ಲಿಸುವಂತೆ ನಿನ್ನೆ ಯಡಿಯೂರಪ್ಪ ಘೋಷಿಸಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಸುದ್ದಿಗೋಷ್ಠಿ ನಡೆಸಿದ್ದಾರೆ.
ಹಾವೇರಿ: ಶಿಗ್ಗಾಂವ್ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಗೆಲ್ಲಿಸುವಂತೆ ನಿನ್ನೆ ಯಡಿಯೂರಪ್ಪ ಘೋಷಿಸಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಸುದ್ದಿಗೋಷ್ಠಿ ನಡೆಸಿದ್ದಾರೆ.
ಯಡಿಯೂರಪ್ಪ ಈಗಲೇ ಅಭ್ಯರ್ಥಿ ಹೆಸರು ಘೋಷಿಸಿರುವುದರಿಂದ ಬೇಸರವಾಗಿದೆ. 2008ರಲ್ಲಿ ಶಿಗ್ಗಾಂವಿಗೆ ಬೊಮ್ಮಾಯಿ ಅವರಿಗಾಗಿ ಪಕ್ಷಕ್ಕೆ ಬದ್ದರಾಗಿ ಸೀಟು ಬಿಟ್ಟುಕೊಟ್ಟೆ. ಇನ್ನು ನನ್ನಲ್ಲಿ ಆಶಾಭಾವನೆ ಇದೆ. ಅಧಿಕೃತ ಅಭ್ಯರ್ಥಿ ನಾನೇ ಆಗುವ ವಿಶ್ವಾಸವಿದೆ, ಎಂದು ಅವರು ಹೇಳಿದ್ದಾರೆ.
ಯಡಿಯೂರಪ್ಪ ಹೇಳಿಕೆಯನ್ನು ಪ್ರಶ್ನಿಸುತ್ತಿಲ್ಲ. ಆದರೆ ಇಂತಹ ಹೇಳಿಕೆ ಕಾರ್ಯಕರ್ತರಲ್ಲಿ ನೋವು ತಂದಿದೆ. ನಮಗೆ ಪಕ್ಷವೇ ಮುಖ್ಯ. 2008ರಲ್ಲಿ ಬೊಮ್ಮಾಯಿ ಕೊಟ್ಟ ಮಾತಿನಂತೆ ನಡೆಯುವ ವಿಶ್ವಾಸವಿದೆ. ಈ ಹಿನ್ನೆಲೆಯಲ್ಲಿ ನಾನು ಸೀಟು ಕೇಳುತ್ತಿದ್ದೇನೆ, ಎಂದು ಅವರು ಹೇಳಿದ್ದಾರೆ.
ಯಡಿಯೂರಪ್ಪನವರೇ ನಮ್ಮ ನಾಯಕರು. ಕ್ಷೇತ್ರದ ಜನರ ಬಳಿ ಹೋಗಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ.
ಕ್ಷೇತ್ರದ ಜನರು ಉಹಾಪೋಹಗಳಿಗೆ ಕಿವಿ ಕೊಡಬಾರದು. ಬೊಮ್ಮಾಯಿ ನನ್ನ ಹಿರಿಯ ಸಹೋದರ ಪ್ರಭಾವಿ ನಾಯಕ, ರಾಜ್ಯದ ಎಲ್ಲಿ ಬೇಕಾದರು ನಿಂತು ಗೆಲ್ಲುವ ತಾಕತ್ತು ಅವರಿಗೆ ಇದೆ, ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
