10 ವರ್ಷದ ಹಿಂದೆ ಶಾಲಾ ವಿದ್ಯಾರ್ಥಿ ನುಡಿದ ಭವಿಷ್ಯ ಇದೀಗ ಭಾರಿ ವೈರಲ್ ಆಗುತ್ತಿದೆ. ಬ್ರಿಟನ್‌ನಿಂದ ಭಾರತಕ್ಕೆ ಆಗಮಿಸಿದ ಆರು ಮಂದಿ ಪ್ರಯಾಣಿಕರಲ್ಲಿ ಈ ಸೋಂಕು ದೃಢಪಟ್ಟಿರುವುದು ಮತ್ತಷ್ಟು ಆತಂಕ ತಂದಿದೆ. ಭಾರತ ವಿರುದ್ಧ ಮುಗ್ಗರಿಸಿದ ಆಸೀಸ್ ತಂಡಕ್ಕೆ ಐಸಿಸಿ ಶಾಕ್ ನೀಡಿದೆ. ಧರ್ಮೇಗೌಡ್ರ ಡೆತ್‌ನೋಟ್ ರಹಸ್, ಗೌಡ್ರ ಹುಡುಗನ ಬಿಟ್ಟು ತೆಲುಗು ಹುಡುಗನ ನೋಡಿದ್ರಾ ರಚಿತಾ? ಡಿಸೆಂಬರ್ 29ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
10 ವರ್ಷದ ಹಿಂದೆ ಶಾಲಾ ವಿದ್ಯಾರ್ಥಿ ನುಡಿದಿದ್ದ 2020ರ ಭವಿಷ್ಯ ಈಗ ಫುಲ್ ವೈರಲ್!...
ಶಾಲಾ ವಿದ್ಯಾರ್ಥಿಯೊಬ್ಬ 10 ವರ್ಷದ ಹಿಂದೆ 2020ರ ಕುರಿತಾಗಿ ಬರೆದಿದ್ದ ಭವಿಷ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಆತ ಬರೆದಿದ್ದೇನು? ನೀವೇ ನೋಡಿ
ರಾಜಕೀಯಕ್ಕೆ ರಜನೀಕಾಂತ್ ಎಂಟ್ರಿ ಇಲ್ಲ, ಕ್ಷಮೆ ಯಾಚಿಸಿದ 'ತಲೈವಾ'!...
ತಮಿಳುನಾಡಿನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇದಕ್ಕೂ ಮುನ್ನ ದಕ್ಷಿಣ ಭಾರತದ ಪ್ರಖ್ಯಾತ ನಟ ಸೂಪರ್ ಸ್ಟಾರ್ ರಜನೀಕಾಂತ್ ತಮ್ಮ ಪಕ್ಷದ ಬಗ್ಗೆ ಘೋಷಣೆ ಮಾಡಲಿದ್ದಾರೆನ್ನಲಾಗಿತ್ತು. ಆದರೀಗ ಅನಾರೋಗ್ಯ ಕಾಡುತ್ತಿರುವ ಹಿನ್ನೆಲೆ ತಾವು ರಾಜಕೀಯದಿಂದ ದೂರ ಉಳಿಯುತ್ತಿರುವುದಾಗಿ ಘೋಷಿಸಿದ್ದಾರೆ ಹಾಗೂ ತಮ್ಮ ಯೋಜನೆಗಳನ್ನು ರದ್ದುಗೊಳಿಸಿದ್ದಾರೆ.
ಪಾಕ್‌ನಲ್ಲಿ ಪ್ರತಿ ವರ್ಷ 1000 ಬಾಲಕಿಯರ ಬಲವಂತದ ಮತಾಂತರ!...
ಮುಸ್ಲಿಂ ಬಾಹುಳ್ಯದ ಪಾಕಿಸ್ತಾನದಲ್ಲಿ ಮದುವೆಗಾಗಿ ಇತರ ಧರ್ಮೀಯ ಹುಡುಗಿಯರ ಬಲವಂತದ ಮತಾಂತರ ನಿರಂತರವಾಗಿ ನಡೆಯುತ್ತಿದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ವರ್ಷಕ್ಕೆ ಸುಮಾರು 1000 ಯುವತಿಯರನ್ನು (ಇವರಲ್ಲಿ ಅಪ್ರಾಪ್ತೆಯರೂ ಇದ್ದಾರೆ) ಇಸ್ಲಾಂಗೆ ಮತಾಂತರಿಸಿ ಬಲವಂತವಾಗಿ ಮದುವೆ ಮಾಡಲಾಗುತ್ತಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಬೆಂಗಳೂರಿನ ಮೂವರು ಸೇರಿ 6 ಮಂದಿಗೆ ಹೊಸ ತಳಿಯ ಕೊರೋನಾ ಸೋಂಕು: ಶಾಕಿಂಗ್ ಮಾಹಿತಿ ಕೊಟ್ಟ ICMR...
ಬ್ರಿಟನ್‌ನಿಂದ ಭಾರತಕ್ಕೆ ಆಗಮಿಸಿದ ಆರು ಮಂದಿ ಪ್ರಯಾಣಿಕರಲ್ಲಿ ಈ ಸೋಂಕು ದೃಢಪಟ್ಟಿದೆ. ಅದರಲ್ಲೂ ಬೆಂಗಳೂರಿಗೆ ಆಗಮಿಸಿದ ಮೂವರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ ಎಂಬುವುದು ಮತ್ತಷ್ಟು ಚಿಂತೆಗೀಡು ಮಾಡಿದೆ.
ಬಾಕ್ಸಿಂಗ್ ಡೇ ಟೆಸ್ಟ್ ಸೋಲಿನ ಬೆನ್ನಲ್ಲೇ ಆಸ್ಟ್ರೇಲಿಯಾಗೆ ಡಬಲ್ ಶಾಕ್!...
ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಗೆದ್ದಿದ್ದ ಆಸ್ಟ್ರೇಲಿಯಾಗೆ 2ನೇ ಪಂದ್ಯದಲ್ಲಿ ಸೋಲಿನ ಆಘಾತ ಎದುರಾಗಿದೆ. ಮೆಲ್ಪೋರ್ನ್ ಪಂದ್ಯದಲ್ಲಿ ಆಸೀಸ್ ಹೀನಾಯ ಸೋಲು ಕಂಡಿದೆ. ಈ ಸೋಲಿನ ಬೆನ್ನಲ್ಲೇ ಮತ್ತೆರಡು ಆಘಾತ ಆಸ್ಟ್ರೇಲಿಯಾ ತಂಡಕ್ಕೆ ಎದುರಾಗಿದೆ.
ಗೌಡ್ರ ಹುಡುಗ ಬೇಕೆಂದು ತೆಲುಗು ಹುಡುಗನನ್ನು ಪ್ರೀತಿಸುತ್ತಿದ್ದಾರಾ ರಚಿತಾ ರಾಮ್?...
ಸ್ಯಾಂಡಲ್‌ವುಡ್ ಹಾಗೂ ಟಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ರಚಿತಾ ರಾಮ್ ಬಗ್ಗೆ ಗಾಸಿಪ್‌ವೊಂದು ಎಲ್ಲೆಡೆ ಹರಿದಾಡುತ್ತಿದೆ. ಅದುವೇ ಸೈಲೆಂಟ್ ಆಗಿ ತೆಲುಗು ಹುಡುಗನ ಜೊತೆ ಡೇಟಿಂಗ್ ಮಾಡುತ್ತಿದ್ದಾರೆನ್ನಲಾಗುತ್ತಿದೆ.
WhatsApp Stckers: ಹೊಸ ವರ್ಷಕ್ಕೆ ವಾಟ್ಸಾಪ್ ಸ್ಟಿಕರ್ಸ್ ಕಳುಹಿಸುವುದು ಹೇಗೆ?...
ಯಾವುದೇ ಹಬ್ಬ, ವಿಶೇಷ ದಿನಗಳ ಬಂದಾಗ ನಿಮ್ಮ ಸ್ನೇಹಿತರು, ಕುಟಂಬದ ಸದಸ್ಯರು ನಿಮಗೆ ವಾಟ್ಸಾಪ್‌ನಲ್ಲಿ ವಿಶಿಷ್ಟ ಸ್ಟಿಕರ್‌ಗಳನ್ನು ಕಳುಹಿಸಿ ಶುಭಾಶಯ ಕೋರುತ್ತಾರೆ. ಆದರೆ, ಆ ಸ್ಟಿಕರ್‌ಗಳನ್ನು ಪಡೆಯುತ್ತಾರೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ನಾವು ನಿಮಗೆ ವಾಟ್ಸಾಪ್ ಸ್ಟಿಕರ್‌ಗಳನ್ನು ಹೇಗೆ ಕಳುಹಿಸಬೇಕು ಎಂಬುದನ್ನು ಇಲ್ಲಿ ತಿಳಿಸಿದ್ದೇವೆ.
ಕೋಲಿಗ್‌ನೊಂದಿಗೆ ಮಂಚ ಏರಿದ್ಲು..ನಾಚಿಕೆ ಬಿಟ್ಟು ಗಂಡನಿಗೂ ಹೇಳಿದ್ಲು!...
ತನ್ನ ಸಹೋದ್ಯೋಗಿಯೊಂದಿಗೆ ಹಾಸಿಗೆ ಹಂಚಿಕೊಂಡ ವಿಷಯವನ್ನು ಮಹಿಳೆ ತನ್ನ ಪತಿಗೆ ಹೇಳಿದ್ದಾಳೆ. ಇದರಿಂದ ನೊಂದ ಪತಿ ಆರು ವರ್ಷದ ಮಗ ಹಾಗೂ ಒಂದೂವರೆ ವರ್ಷದ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
2021ರಲ್ಲಿ ಜನಸಾಮಾನ್ಯರು- ಶ್ರೀಮಂತರು ಆಯ್ಕೆ ಮಾಡುವ ಸಾರಿಗೆ ಯಾವುದು? ಸಮೀಕ್ಷಾ ವರದಿ ಪ್ರಕಟ!...
2021ರಲ್ಲಿ ಶ್ರೀಮಂತರು, ಜನಸಾಮಾನ್ಯರು ಸೇರಿದಂತೆ ಬಹುತೇಕರ ಸಾರಿಗೆ ಆಯ್ಕೆ ಯಾವುದಾಗಲಿದೆ? ಈ ಕುರಿತ ಸಮೀಕ್ಷಾ ವರದಿ ಪ್ರಕಟಗೊಂಡಿದೆ.
ಧರ್ಮೇಗೌಡ್ರ ಡೆತ್ನೋಟ್ನಲ್ಲಿ ಅನೇಕ ರಹಸ್ಯಗಳಿವೆ: ಮಾಧ್ಯಮಗಳಿಗೆ ವಿವರಿಸಿದ ಸಿಎಂ...
ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ಇನ್ನೂ ನಿಗೂಢವಾಗಿಯೇ ಇದೆ. ಡೆತ್ ನೋಟ್‌ನಲ್ಲಿ ಮಹತ್ವದ ವಿಚಾರಗಳನ್ನ ತಿಳಿಸಿದ್ದಾರೆ ಎಂದು ಸ್ವತಃ ಸಿಎಂ ಮಾಧ್ಯಮಗಳ ಮುಂದೆ ವಿವರಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 29, 2020, 4:45 PM IST