ಸಾಮಾನ್ಯವಾಗಿ ಎಲೆಕ್ಷನ್ ಬಂದ್ರೆ ಸಾಕು ನಾಯಕರು ಟಿಕೆಟ್ಗಾಗಿ ಕಿತ್ತಾಡೋದು ಕಾಮನ್. ಆದ್ರೆ ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಆಗ್ತಿರೋದೆ ಬೇರೆ.ಯಾಕಂದ್ರೆ ಬಿಜೆಪಿ ನಾಯಕರು ಸ್ಪರ್ಧೆಗೆ ಟಿಕೆಟ್ಗಿರಲಿ, ತಮ್ಮ ಕ್ಷೇತ್ರವನ್ನೂ ಸಹ ಬಿಟ್ಟು ಕೊಡೋಕೆ ಮುಂದಾಗಿದ್ದಾರೆ. ಏಕೆ ಅಂತೀರಾ ಈ ವರದಿ ನೋಡಿ.
ಬಾಗಲಕೋಟೆ(ಸೆ.22): ಸಾಮಾನ್ಯವಾಗಿ ಎಲೆಕ್ಷನ್ ಬಂದ್ರೆ ಸಾಕು ನಾಯಕರು ಟಿಕೆಟ್ಗಾಗಿ ಕಿತ್ತಾಡೋದು ಕಾಮನ್. ಆದ್ರೆ ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಆಗ್ತಿರೋದೆ ಬೇರೆ.ಯಾಕಂದ್ರೆ ಬಿಜೆಪಿ ನಾಯಕರು ಸ್ಪರ್ಧೆಗೆ ಟಿಕೆಟ್ಗಿರಲಿ, ತಮ್ಮ ಕ್ಷೇತ್ರವನ್ನೂ ಸಹ ಬಿಟ್ಟು ಕೊಡೋಕೆ ಮುಂದಾಗಿದ್ದಾರೆ. ಏಕೆ ಅಂತೀರಾ ಈ ವರದಿ ನೋಡಿ.
ಇಂಥಾ ಒಂದು ವಿಚಿತ್ರ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ ಬಾಗಲಕೋಟೆ ಜಿಲ್ಲೆ. ಇದಕ್ಕೆ ಕಾರಣ ಮಾಜಿ ಸಿಎಂಗಳು ಉತ್ತರ ಕರ್ನಾಟಕದತ್ತ ಮುಖ ಮಾಡಿದ್ದು .
ಯಾವಾಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಉತ್ತರ ಕರ್ನಾಟಕದಿಂದ ಸ್ಪರ್ಧಿಸಲು ಆದೇಶ ನೀಡಿದ್ರೋ, ಆಗ್ಲೇ ಕ್ಷೇತ್ರ ಬಿಟ್ಟುಕೊಡಲು ಬಿಜೆಪಿ ಶಾಸಕರು ನಾ ಮುಂದು ತಾ ಮುಂದು ಅಂತ ಪೈಪೋಟಿಗೆ ನಿಂತು ಕ್ಷೇತ್ರ ತೊರೆಯಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ಬಾಗಲಕೋಟೆ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ, ಶ್ರೀಕಾಂತ ಕುಲಕರ್ಣಿ, ದೊಡ್ಡನಗೌಡ ಪಾಟೀಲ, ಸಿದ್ದು ಸವದಿ ಸೇರಿದಂತೆ ಎಲ್ಲಾ ಮಾಜಿ ಶಾಸಕರು ಯಡಿಯೂರಪ್ಪನವರನ್ನ ತಮ್ಮ ಕ್ಷೇತ್ರಕ್ಕೆ ಕರೆತರೋಕೆ ಗಂಭೀರ ಯತ್ನ ನಡೆಸಿದ್ದಾರೆ.
ಜೆಡಿಎಸ್ನಲ್ಲೂ ಪೈಪೋಟಿ ಶುರು
ಇತ್ತ ಜಿಲ್ಲೆಯ ಜೆಡಿಎಸ್ ನಾಯಕರು ತಮ್ಮ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನ ಬಾಗಲಕೋಟೆ ಜಿಲ್ಲೆಯಿಂದ ಸ್ಪರ್ಧೆ ಮಾಡಿಕೊಳ್ಳುವಂತೆ ಮನವಿ ಮಾಡಲು ಮುಂದಾಗಿದ್ದಾರೆ.
ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಕ್ಷೇತ್ರದಾನ ರಾಜಕೀಯ ಶುರುವಾಗಿದೆ. ಈ ರಾಜಕೀಯ ಬೆಳವಣಿಗೆ ಯಾವ ದಿಕ್ಕಿನತ್ತ ಹೊರಳುತ್ತೆ ಅನ್ನೋದನ್ನು ಕಾದು ನೋಡಬೇಕು.
