ಬೆಂಗಳೂರು(ಡಿ.20): ಬೆಂಗಳೂರಿನ ಜೆ.ಪಿ. ಪಾರ್ಕ್​ ಉದ್ಯಾನವನದಲ್ಲಿ ಶಾಸಕ ಮುನಿರತ್ನ ಭಾವಚಿತ್ರವಿರುವ ಫ್ಲೆಕ್ಸ್​'ಗಳು ರಾರಾಜಿಸುತ್ತಿದೆ. ಈ ಮೂಲಕ ಕೆಎಂಸಿ ನಿಯಮ ಉಲ್ಲಂಘನೆಯಾಗಿದ್ದು, ಫ್ಲೆಕ್ಸ್​ ಹಾಕಿದವರ ವಿರುದ್ಧ ಎಫ್​ ಐಆರ್ ದಾಖಲಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಕೆಎಂಸಿ ನಿಯಮದ ಪ್ರಕಾರ ಉದ್ಯಾನವನದಲ್ಲಿ ಫ್ಲೆಕ್ಸ್​ , ಬ್ಯಾನರ್​'ಗಳ ಪ್ರದರ್ಶನಕ್ಕೆ ಅವಕಾಶವಿಲ್ಲ. ಆದರೆ, ಪಾರ್ಕ್'​ನಲ್ಲಿ ಓಪನ್​ ಜಿಮ್​,ದೀಪ ಬೆಳಗಿಸುವ ಕಾರ್ಯಕ್ರಮವಿದೆ ಎಂದು ಶಾಸಕರ ಭಾವಚಿತ್ರವಿರುವ ಫ್ಲೆಕ್ಸ್ ಹಾಕಲಾಗಿದೆ. ಈ ಸಂಬಂಧ ವಾಯುವಿಹಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಕಾರ್ಪೋರೇಟರ್​ ಮಮತಾ ವಾಸುದೇವ್ ಶಾಸಕರು ನಿಲುವನ್ನು ಖಂಡಿಸಿದ್ದಾರೆ, ಆದರೆ ಶಾಸಕ ಮುನಿರತ್ನ ಮಾತ್ರ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.