ಅಮಾನತು ಆದೇಶ ರದ್ದುಗೊಳಿಸುವಂತೆ ಮನವಿ ಮಾಡಿದ್ದರೂ. ಜತೆಗೆ ಕ್ಷಮಾಪಣೆ ಪತ್ರವನ್ನೂ ಬರೆದು ಪಕ್ಷದ ಶಿಸ್ತು ಸಮಿತಿಗೆ ಕೊಟ್ಟಿದ್ದರು.

ಬೆಂಗಳೂರು(ಫೆ.10): ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಜೆಡಿಎಸ್ ಶಾಸಕ ಕೆ.ಗೋಪಾಲಯ್ಯಅವರನ್ನು ಮತ್ತೆ ಪಕ್ಷದ ತೆಕ್ಕೆಗೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

ಪರಿಣಾಮ ಶುಕ್ರವಾರ ನಡೆಯಲಿರುವ ಪಕ್ಷದ ರಾಜ್ಯ ಚುನಾವಣಾ ಸಂಘಟನಾ ಸಮಾವೇಶದಲ್ಲಿ ಗೋಪಾಲಯ್ಯ ಪಾಲ್ಗೊಳ್ಳಲಿದ್ದಾರೆ.ಅಡ್ಡಮತದಾನದ ಆರೋಪದ ಹಿನ್ನೆಲೆಯಲ್ಲಿ ಗೋಪಾಲಯ್ಯ ಸೇರಿದಂತೆ ಒಟ್ಟು ಎಂಟು ಶಾಸಕರನ್ನು ಪಕ್ಷದಿಂದ ಅಮಾನತಗೊಳಿಸಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ಗೋಪಾಲಯ್ಯ ಅವರು ಅಮಾನತು ಆದೇಶ ರದ್ದುಗೊಳಿಸುವಂತೆ ಮನವಿ ಮಾಡಿದ್ದರೂ. ಜತೆಗೆ ಕ್ಷಮಾಪಣೆ ಪತ್ರವನ್ನೂ ಬರೆದು ಪಕ್ಷದ ಶಿಸ್ತು ಸಮಿತಿಗೆ ಕೊಟ್ಟಿದ್ದರು. ಅಂತಿಮವಾಗಿ ಅಮಾನತು ಆದೇಶ ವಾಪಸ್ ಪಡೆದುಕೊಳ್ಳಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.