ಬೆಂಗಳೂರಿನ ಊರ್ವಶಿ ಚಿತ್ರಮಂದಿರ ಎಲ್ಲ 1 ಸಾವಿರ ಟಿಕೆಟ್ ಖರೀದಿಸಿ ತಮ್ಮ ಕ್ಷೇತ್ರದ ಮತದಾರರಿಗೆ ನೀಡಲು ಮುಂದಾಗಿದ್ದಾರೆ.
ಬೆಂಗಳೂರು(ಅ.17): ತಮಿಳು ನಟ ವಿಜಯ್ ಅಭಿನಯದ ಮರ್ಸೆಲ್ ಸಿನಿಮಾ ನಾಳೆ ಬಿಡುಗಡೆಯಾಗಲಿದ್ದು, ಸಿನಿಮಾದ ಒಂದು ಸಾವಿರ ಟಿಕೆಟ್'ಅನ್ನು ಕಾಂಗ್ರೆಸ್ ಶಾಸಕ ಆರ್.ವಿ. ದೇವರಾಜ್ ಪುತ್ರ ಬಿಬಿಎಂಪಿ ಸದಸ್ಯ ಯುವರಾಜ್ ಖರೀದಿಸಿ ತಮಿಳು ಪ್ರೇಮ ತೋರಿಸಿದ್ದಾರೆ.
ಬೆಂಗಳೂರಿನ ಊರ್ವಶಿ ಚಿತ್ರಮಂದಿರ ಎಲ್ಲ 1 ಸಾವಿರ ಟಿಕೆಟ್ ಖರೀದಿಸಿ ತಮ್ಮ ಕ್ಷೇತ್ರದ ಮತದಾರರಿಗೆ ನೀಡಲು ಮುಂದಾಗಿದ್ದಾರೆ. ಕಾನೂನು ಉಲ್ಲಂಘಿಸಿ ಮರ್ಸೆಲ್ ಸಿನಿಮಾ ಟಿಕೆಟ್ ಖರೀದಿಸಿದ್ದಾರೆ. ಊರ್ವಶಿ ಚಿತ್ರಮಂದಿರದಲ್ಲಿ ಶಾಸಕ ಆರ್.ವಿ. ದೇವರಾಜ್ ಮತ್ತು ಯುವರಾಜ್ ಬ್ಯಾನರ್‌ಗಳು ರಾರಾಜಿಸುತ್ತಿವೆ.
