. ‘ನನಗೆ ಬೇರೆ ಗ್ರೂಪ್ನಿಂದ ಬಂದ ಫೋಟೋ ನೇರವಾಗಿ ರವಾನೆಯಾಗಿದೆ’. ‘ಟಚ್ ಸ್ಕ್ರೀನ್ ಮೊಬೈಲ್ನಿಂದಾಗಿ ನನ್ನ ಅರಿವಿಗೆ ಬಾರದೆ ರವಾನೆಯಾಗಿದೆ’
ಬೆಳಗಾವಿ(ಮೇ.02): ಹಿರಿಯ ಅಧಿಕಾರಿಗಳು,ರಾಜಕಾರಣಿಗಳು ಹಾಗೂ ಪತ್ರಕರ್ತರಿದ್ದ 50ಕ್ಕೂ ಹೆಚ್ಚು ಗಣ್ಯರ ವಾಟ್ಸಪ್ ಗ್ರೂಪಿನಲ್ಲಿ ಶಾಸಕರೊಬ್ಬರು ಅಶ್ಲೀಲ ಚಿತ್ರ ಕಳಿಸಿದ್ದಾರೆ.
ಗಣ್ಯರು ಇರುವ ಬೆಳಗಾವಿಯ ಮೀಡಿಯಾ ಫೋರ್ಸ್ ಗ್ರೂಪ್ ಎಂಬ ವಾಟ್ಸಪ್ ಗ್ರೂಪಿನಲ್ಲಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅಶ್ಲೀಲ ಚಿತ್ರವನ್ನು ಹರಿಯಬಿಟ್ಟಿದ್ದಾರೆ. ಅಶ್ಲೀಲ ಚಿತ್ರವನ್ನು ನೋಡಿದ ಇತರ ಸದಸ್ಯರು ದಂಗಾಗಿದ್ದಾರೆ. ನಂತರ ಈ ಬಗ್ಗೆ ಪ್ರತಿಕ್ರಯಿಸಿದ ಶಾಸಕ ಮಹಾಂತೇಶ ಕವಟಗಿಮಠ, ‘ನನ್ನ ಮೊಬೈಲ್ನಿಂದ ತಪ್ಪಾಗಿ ವಾಟ್ಸಪ್ ಗ್ರೂಪ್ಗೆ ಬಂದಿದೆ’.‘ಉದ್ದೇಶ ಪೂರ್ವಕವಾಗಿ ಕಳುಹಿಸಿದ ಫೋಟೋಗಳಲ್ಲ’. ‘ನನಗೆ ಬೇರೆ ಗ್ರೂಪ್ನಿಂದ ಬಂದ ಫೋಟೋ ನೇರವಾಗಿ ರವಾನೆಯಾಗಿದೆ’. ‘ಟಚ್ ಸ್ಕ್ರೀನ್ ಮೊಬೈಲ್ನಿಂದಾಗಿ ನನ್ನ ಅರಿವಿಗೆ ಬಾರದೆ ರವಾನೆಯಾಗಿದೆ’ಎಂದು ಸುವರ್ಣ ನ್ಯೂಸ್'ನೊಂದಿಗೆ ಮಾತನಾಡಿ ಕ್ಷಮೆಯಾಚಿಸಿದ್ದಾರೆ.
