ಚೆನ್ನೈನ ಕೊವತ್ತೂರು ಠಾಣೆಯಲ್ಲಿ ದೂರು ನೀಡಿರುವ ಶರವಣನ್, ಶಶಿಕಲಾ ಅವರು ಎಐಎಡಿಎಂಕೆ ಶಾಸಕರನ್ನು ಅಪಹರಿಸಿ ಗೋಲ್ಡನ್​ ಬೇ ರೆಸಾರ್ಟ್’ನಲ್ಲಿ ಕೂಡಿಟ್ಟಿದ್ದರೆಂದು ಆರೋಪಿಸಿದ್ದಾರೆ.

ಚೆನ್ನೈ (ಫೆ. 15): ಓ.ಪಿ. ಪನ್ನೀರ್ ಸೆಲ್ವಂ ಬಣದೊಂದಿಗೆ ಗುರುತಿಸಿಕೊಂಡಿರುವ ಅಣ್ಣಾ ಡಿಎಂಕೆ ಶಾಸಕ ಶರವಣನ್ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಹಾಗೂ ಪಳನಿಸ್ವಾಮಿ ವಿರುದ್ಧ ಅಪಹರಣದ ಪ್ರಕರಣ ದಾಖಲಿಸಿದ್ದಾರೆ.

ಚೆನ್ನೈನ ಕೊವತ್ತೂರು ಠಾಣೆಯಲ್ಲಿ ದೂರು ನೀಡಿರುವ ಶರವಣನ್, ಶಶಿಕಲಾ ಅವರು ಎಐಎಡಿಎಂಕೆ ಶಾಸಕರನ್ನು ಅಪಹರಿಸಿ ಗೋಲ್ಡನ್​ ಬೇ ರೆಸಾರ್ಟ್’ನಲ್ಲಿ ಕೂಡಿಟ್ಟಿದ್ದರೆಂದು ಆರೋಪಿಸಿದ್ದಾರೆ.

ಎಫ್’​​ಐಆರ್​ ದಾಖಲಿಸಿದ ಬಳಿಕ ರೆಸಾರ್ಟ್​ಗೆ ಪೊಲೀಸರು ರೆಸಾರ್ಟ್’ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಪ್ರತಿಯೊಬ್ಬ ಶಾಸಕರಿಂದ ಪ್ರತ್ಯೇಕವಾಗಿ ಮಾಹಿತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.