ಶಾಸಕರ ಈ ವರ್ತನೆಗೆ ಬೇಸತ್ತ ವಾಲ್ಮಿಕಿ ಸಮುದಾಯದ ಮುಖಂಡರು ಸಭೆಯನ್ನ ಬಹಿಷ್ಕರಿಸಿ ಹೊರೆ ನಡೆದರು. ನಂತರ ಸಮುದಾಯದ ಮುಖಂಡರ ಅನುಪಸ್ಥಿತಿಯಲ್ಲಿ ಶಾಸಕರು ಹಾಗೂ ತಹಶಿಲ್ದಾರ್ ಸಭೆಯನ್ನು ಮುಂದುವರೆಸಿ ಕಾರ್ಯಕ್ರಮದ ರೂಪುರೇಷುಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದರು.

ನೆಲಮಂಗಲ(ಸೆ.26): ವಾಲ್ಮಿಕಿ ಜಯಂತಿ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಜೆಡಿಎಸ್ ಶಾಸಕ ಉದ್ಧಟತನದ ಉತ್ತರ ನೀಡಿದ್ದಾರೆ.

ಪಟ್ಟಣದ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ವಾಲ್ಮಿಕಿ ಜಯಂತಿಯಲ್ಲಿ ಶಾಸಕ ಶ್ರೀನಿವಾಸ ಮೂರ್ತಿ ತಡವಾಗಿ ಆಗಮಿಸಿದ್ದಾರೆ. ಇದನ್ನು ವೇದಿಕೆಯಲ್ಲಿದ್ದ ಮುಖಂಡರು ಪ್ರಶ್ನಿಸಿದರು. ಅದಕ್ಕೆ ಉಡಾಫೆ ಉತ್ತರ ನೀಡಿದ ಶಾಸಕರು ಇದುವರೆಗೂ ನಾನು ಗೋಲಿ ಆಡಲು ಹೋಗಿರಲಿಲ್ಲ' ಎಂದು ಉದ್ಧಟತನದಿಂದ ವರ್ತಿಸಿದ್ದಾರೆ.

ಶಾಸಕರ ಈ ವರ್ತನೆಗೆ ಬೇಸತ್ತ ವಾಲ್ಮಿಕಿ ಸಮುದಾಯದ ಮುಖಂಡರು ಸಭೆಯನ್ನ ಬಹಿಷ್ಕರಿಸಿ ಹೊರೆ ನಡೆದರು. ನಂತರ ಸಮುದಾಯದ ಮುಖಂಡರ ಅನುಪಸ್ಥಿತಿಯಲ್ಲಿ ಶಾಸಕರು ಹಾಗೂ ತಹಶಿಲ್ದಾರ್ ಸಭೆಯನ್ನು ಮುಂದುವರೆಸಿ ಕಾರ್ಯಕ್ರಮದ ರೂಪುರೇಷುಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಹಾಗೆ ಅಂದಿದ್ದು ನಿಜ, ಆದರೆ ನಾನು ಬೇರೆ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ತಡವಾಗುವ ಬಗ್ಗೆ ಸಭೆಯ ಅಧ್ಯಕ್ಷರಿಗೆ ದೂರವಾಣಿ ಮುಖಾಂತರ ತಿಳಿಸಿದ್ದೆ. ಹಾಗೂ ನಾನು ಯಾವುದೇ ಸಮುದಾಯವನ್ನು ಕಡೆಗಣಿಸಿಲ್ಲ. ಕೆಲವರು ಉದ್ದೇಶಪೂರ್ವಕವಾಗಿ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಮಜಾಯಿಷಿ ನೀಡಿದರು.