ಸಿಸಿಟಿವಿ ದೃಶ್ಯ ನೀಡಲು ಫರ್ಜಿ ಕೆಫೆ ಮಾಲಿಕರ ನಕಾರ; ಕೆಫೆ ಮಾಲೀಕರಿಗೆ ಒತ್ತಡ ಹಾಕಿದ್ದಾರಾ ಹ್ಯಾರಿಸ್?

news | Thursday, February 22nd, 2018
Suvarna Web Desk
Highlights

ನಲಪಾಡ್ ಗ್ಯಾಂಗ್​’ನಿಂದ ವಿದ್ವತ್ ಮೇಲೆ ಹಲ್ಲೆ ಪ್ರಕರಣದ ಸಾಕ್ಷ್ಯ ನಾಶ ಮಾಡಲು ಪೊಲೀಸರು ಹುನ್ನಾರ ನಡೆಸುತ್ತಿದ್ದಾರೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ. 

ಬೆಂಗಳೂರು (ಫೆ.21): ನಲಪಾಡ್ ಗ್ಯಾಂಗ್​’ನಿಂದ ವಿದ್ವತ್ ಮೇಲೆ ಹಲ್ಲೆ ಪ್ರಕರಣದ ಸಾಕ್ಷ್ಯ ನಾಶ ಮಾಡಲು ಪೊಲೀಸರು ಹುನ್ನಾರ ನಡೆಸುತ್ತಿದ್ದಾರೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ. 
ಪಾರ್ಕಿಂಗ್​ ಸ್ಥಳದಲ್ಲೂ ವಿದ್ವತ್ ಮೇಲೆ ನಲಪಾಡ್  ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾನೆ. ಪಾರ್ಕಿಂಗ್ ಸ್ಥಳದ ಸಿಸಿಟಿವಿ ದೃಶ್ಯ ನೀಡಲು ಫರ್ಜಿ ಕೆಫೆ ಮಾಲಿಕರ ಮೀನಾಮೇಷ ಎಣಿಸುತ್ತಿದ್ದಾರೆ.  ಪಾರ್ಕಿಂಗ್​ ಸ್ಥಳದ ಸಿಸಿಟಿವಿ ದೃಶ್ಯ ಇಲ್ಲ ಎನ್ನುತ್ತಿದ್ದಾರೆ ಫರ್ಜಿ ಕೆಫೆ ಮಾಲೀಕರು. ಘಟನೆ ನಡೆದ ದಿನವೇ ಫರ್ಜಿ ಕೆಫೆ ಮಾಲೀಕರಿಗೆ ಹ್ಯಾರಿಸ್  ಒತ್ತಡ ಹಾಕಿದ್ದಾರಾ? ಮಗನ ರಕ್ಷಣೆಗೆ ನಿಂತಿದ್ದಾರಾ ಹ್ಯಾರೀಸ್ ಎನ್ನುವ ಅನುಮಾನ ದಟ್ಟವಾಗಿದೆ. 

ಕಾರ್​​ ಪಾರ್ಕಿಂಗ್​ ಜಾಗದ ಸಿಸಿಟಿವಿ ಪಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.  ಪೊಲೀಸರು  ಫರ್ಜಿ ಕೆಫೆಯ ಭಾಗದ ಸಿಸಿಟಿವಿ ದೃಶ್ಯ ಮಾತ್ರ ಕಲೆಹಾಕಿದ್ದಾರೆ. ಯುಬಿಸಿಟಿ ಪಾರ್ಕಿಂಗ್ ಜಾಗ,  ಇತರೆ ಜಾಗದ ದೃಶ್ಯವನ್ನು  ಸಿಸಿಬಿ ಅಧಿಕಾರಿಗಳು
ಪಡೆದಿಲ್ಲ.

Comments 0
Add Comment

  Related Posts

  Customs Officer Seize Gold

  video | Saturday, April 7th, 2018

  BDA Converts Playground into CA Site

  video | Thursday, April 5th, 2018

  NA Harris Meets CM Siddaramaiah Ahead of Finalizing Tickets

  video | Thursday, April 12th, 2018
  Suvarna Web Desk