ಸಮಾವೇಶಕ್ಕೆ ಬರುವ ಕಾರ್ಯಕರ್ತರಿಗೆಲ್ಲರಿಗೂ ಶಾಸಕರಿಂದ ಪೆಟ್ರೋಲ್ ಭಾಗ್ಯ ದೊರಕಿದಂತಾಗಿದೆ.

ಸುರಪುರ (ಡಿ.17): ಯಾದಗಿರಿಯ ಸುರಪುರ ತಾಲೂಕಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶಕ್ಕೆ ಬರುವಂತಹ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ ಪೆಟ್ರೋಲ್ ಭಾಗ್ಯವನ್ನು ನೀಡಲಾಗಿದೆ.

ಸುರಪುರ ಶಾಸಕರ ವತಿಯಿಂದ ಪ್ರತೀ ಬೈಕ್’ಗೆ 2 ಲೀಟರ್ ಪೆಟ್ರೋಲ್ ಉಚಿತವಾಗಿ ನೀಡುವುದಾಗಿ ಹೇಳಲಾಗಿದೆ. ಸುರಪುರದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಕಾರ್ಯಕರ್ತರಿಗೆ ಪೆಟ್ರೋಲ್ ಆಫರ್ ನೀಡಿದ್ದಾರೆ.

ಇದರಿಂದ ಸಮಾವೇಶಕ್ಕೆ ಬರುವ ಕಾರ್ಯಕರ್ತರಿಗೆಲ್ಲರಿಗೂ ಶಾಸಕರಿಂದ ಪೆಟ್ರೋಲ್ ಭಾಗ್ಯ ದೊರಕಿದಂತಾಗಿದೆ.