ಬೆಂಗಳೂರು(ಸೆ.18): ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದಸ್ನೇಹ ಸಮ್ಮಿಲನಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಸಿ.ಟಿ. ರವಿ ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಜಿಲ್ಲೆಯ ಜನತೆಯೊಂದಿಗೆ ಕುಣಿದಾಡಿದರು.

ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂದು ಸ್ನೇಹ ಸಮ್ಮಿಲನಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ  ಮಾತನಾಡಿದ ಕೇಂದ್ರ ಸಾಂಖಿಕ ಮತ್ತು ಅನುಷ್ಠಾನ ಇಲಾಖೆ ಸಚಿವ ಡಿ.ವಿ.ಸದಾನಂದಗೌಡ, ಅಡಕೆ ಬೆಳೆಗಾರರು ತಮ್ಮ ಬೆಳೆಗೆ ತಗಲುತ್ತಿರುವ ರೋಗಗಳಿಂದ ಚಿಂತೆಗೀಡಾಗಿದ್ದು, ಸಮಸ್ಯೆಗೆ ಪರಿಹಾರಕ್ಕೆ ಕಲ್ಪಿಸುವ ಸಂಬಂಧ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸಿತಾರಾಮ್ರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಚಿಕ್ಕಮಗಳೂರು ಜಿಲ್ಲೆ ಜನ ಕಷ್ಟಜೀವಿಗಳು, ಪ್ರಾಮಾಣಿಕರು. ಅಂತಹವರ ಬೆಳೆ ಮತ್ತು ಬೆಲೆ ಕೈಕೊಟ್ಟು ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಕಾಫಿ ಬೆಳೆಗೆ ರೋಗ, ಬೆಲೆ ಏರಿಳಿತ, ಅಕೆಗೆ ಕೊಳೆ ರೋಗ, ಬೆಲೆ ಕುಸಿತ, ತೆಂಗು, ಭತ್ತಕ್ಕೆ ಧಾರಣೆಸಿಗದಿರುವುದು ಜನರನ್ನು ತಲ್ಲಣಗೊಳಿಸಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ಮಾತನಾಡಿ, ಉದ್ಯೋಗ, ವ್ಯಾಪಾರ, ಮುಂತಾದ ಕಾರಣಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಚಿಕ್ಕಮಗಳೂರಿನ ಜನ ಒಂದೆಡೆ ಸೇರಿ ತಮ್ಮ ತನ ಮೆರೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎಂದು ಹೇಳಿದರು.

ಸಂದರ್ಭದಲ್ಲಿ ವಿಧಾನ ಪರಿಷತ್ಸಭಾಪತಿ ಡಿ.ಎಚ್‌. ಶಂಕರಮೂರ್ತಿ, ಶಾಸಕರಾದ ವಿಜಯಕುಮಾರ್ಇದ್ದರು.

ಸಾಸಂಸ್ಕೃತಿ ಕಾರ್ಯಕ್ರಮ: ಬೆಂಗಳೂರು ನಗರದ ವಿವಿಧ ಭಾಗಗಳಲಿ ನೆಲೆಸಿರುವ ಚಿಕ್ಕಮಗಳೂರಿಗರನ್ನು ಒಂದೆಡೆ ಸೇರಿಸುವುದಕ್ಕಾಗಿ ಹಮ್ಮಿಕೊಳ್ಳಲಾಗಿದ್ದ, ಸಮ್ಮಿಲನ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾಂಸ್ಕೃತಿ ಕಾರ್ಯಕ್ರಮಗಳ ಪ್ರದರ್ಶನಗೊಂಡವು. ಕಾರ್ಯಕ್ರಮದ ಕುರಿತು ಮಾತನಾಡಿದ ಶಾಸಕ ಸಿ.ಟಿ. ರವಿ, ಬೆಂಗಳೂರು ನಗರದಲ್ಲಿ ನೆಲೆಸಿರುವವರಿಗೆ ಪಕ್ಕದ ಮನೆಯ ಪರಿಚಯವೂ ಇರುವುದಿಲ್ಲ. ಇವರಿಗೆ ಯಾವುದೇ ತೊಂದರೆಯಾದರೆ ಸಹಾಯ ಹಸ್ತ ಚಾಚುವುದಕ್ಕೆ ಯಾರೂ ಮುಂದೆ ಬರುವುದಿಲ್ಲ. ಹಿನ್ನೆಲೆಯಲ್ಲಿ ಇಲ್ಲಿ ನೆಲೆಸಿರುವವರನ್ನೇ ಪರಿಚತರನ್ನಾಗಿ ಮಾಡಿಕೊಂಡು ಜಿಲ್ಲೆಯ ಜನರ ಕಷ್ಟಗಳಿಗೆ ಸ್ಪಂದನೆ ಸಿಗುವಂತೆ ಮಾಡುವುದಕ್ಕಾಗಿ ಸ್ನೇಹಮಿಲನ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಮುಖ ಸಾಂಪ್ರದಾಯಿಕ ಕಲೆಗಳನ್ನು ಪ್ರದರ್ಶನ. ಗೀತ ಕಲರವ, ಭತರನಾಟ್ಯ, ಮಾತನಾಡುವ ಗೊಂಬೆ, ಸುಗಮ ಸಂಗೀತ, ನಗೆಹಬ್ಬ, ಹಾಸ್ಯಭರತಿ ತತ್ವಪದ ಗಾಯನವನ್ನು ಆಯೋಜಿಸಲಾಗಿತ್ತು.