ಗಂಗಾವತಿ(ಜು.28): ಶಾಸಕ ಶಿವರಾಜ್ ತಂಗಡಿ ಸಹೋದರ ನಾಗರಾಜ್ ತಂಗಡಗಿ  ಕಾಣೆಯಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಾರಟಗಿ ಪಟ್ಟಣದಿಂದ ಜುಲೈ 24 ರಂದು  ಕಾಣೆಯಾಗಿದ್ದಾರೆ. . ಜುಲೈ 24 ರಂದು ನಾಗರಾಜ್ ತಂಗಡಗಿ ಕ್ಷೌರ ಮಾಡಿಸಿಕೊಂಡು ಬರೋದಾಗಿ ಹೇಳಿ ಹೋಗಿದ್ರು. ಆದ್ರೆ ಇದುವರೆಗೂ ಮನೆಗೆ ಬಂದಿಲ್ಲ. ಈ ಬಗ್ಗೆ ತಂಗಡಗಿಯ ಮತ್ತೋರ್ವ ಸಹೋದರ ರವಿ ಪಾಟೀಲ್ ಕಾರಟಗಿ ಠಾಣೆಯಲ್ಲಿ ದೂರು ನೀಡಿದ್ದಾರೆ. ನಾಗರಾಜ ತಂಗಡಗಿ  ನಾಪತ್ತೆ ಹಿಂದೆ ಹಲವಾರು ಅನುಮಾನಗಳು ವ್ಯಕ್ತವಾಗಿವೆ. ರವಿ ತಂಗಡಗಿ ದೂರಿನನ್ವಯ ಕಾರಟಗಿ ಠಾಣೆ ಪೋಲೀಸರು ನಾಗರಾಜ್ ತಂಗಡಿಗಾಗಿ ಹುಡುಕಾಟ ನಡೆಸಿದ್ದಾರೆ.