ಕಾರಟಗಿ(ಆ.01): ಕಳೆದ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ಶಾಸಕ, ಮಾಜಿ ಸಚಿವ ಶಿವರಾಜ್ ತಂಗಡಗಿ ಸಹೋದರ ನಾಗರಾಜ್ ತಂಗಡಗಿ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಜು. 24ರಂದು ನಾಗರಾಜ್ ತಂಗಡಗಿ ಕ್ಷೌರ ಮಾಡಿಸಿಕೊಂಡು ಬರುವುದಾಗಿ ಹೇಳಿ ಹೋದವರು ಮನೆಗೆ ವಾಪಸ್ಸಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಸಹೋದರ ರವಿ ತಂಗಡಗಿ ಕಾರಟಗಿ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಶೋಧ ಆರಂಭಿಸಿದ್ದ ಸಿಪಿಐ ದೀಪಕ್ ಭೂಸರೆಡ್ಡಿ ನೇತೃತ್ವದ ತಂಡ ಶನಿವಾರ ಮಧ್ಯರಾತ್ರಿ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ನಾಗರಾಜ್ ಅವರನ್ನು ಪತ್ತೆಮಾಡಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.