ಟೋಲ್ ಮ್ಯಾನೇಜರ್‌'ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಶಾಸಕ ಸುರೇಶ್ ಗೌಡ ಬೆಂಬಲಿಗರ ಜೊತೆ ಟೋಲ್‌ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ತುಮಕೂರು (ಮಾ.14): ಟೋಲ್​ ಸಿಬ್ಬಂದಿ ಕಾರನ್ನು ತಡೆದ್ದಕ್ಕೆ ಬಿಜೆಪಿ ಶಾಸಕ ಸುರೇಶ್ ಗೌಡ ಗುಂಡಾಗಿರಿ ನಡೆಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಕ್ಯಾತಸಂದ್ರದಲ್ಲಿರುವ ರಾ.ಹೆ.4ರ ಟೋಲ್'ನ ವಿಐಪಿ ಗೇಟ್ ನಲ್ಲಿ ಶಾಸಕರ ಕಾರು ತಡೆದಿದ್ದಕ್ಕೆ ಟೋಲ್ ಮ್ಯಾನೇಜರ್ ಮಲ್ಲಿಕಾರ್ಜುನ್ ಹಾಗೂ ಸಿಬ್ಬಂದಿ ಮೇಲೆ ಶಾಸಕರು ಹಲ್ಲೆ ನಡೆಸಿದ್ದಾರೆ.

ಟೋಲ್ ಮ್ಯಾನೇಜರ್‌'ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಶಾಸಕ ಸುರೇಶ್ ಗೌಡ ಬೆಂಬಲಿಗರ ಜೊತೆ ಟೋಲ್‌ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಖುದ್ದು ಶಾಸಕರೇ ಮ್ಯಾನೇಜರ್​ ಮೇಲೆ ಹಲ್ಲೆ ನಡೆಸಿದ್ದರಾದರೂ, ಶಾಸಕರ ವಿರುದ್ಧ ದೂರು ದಾಖಲಿಸಲು ಟೋಲ್ ಮ್ಯಾನೇಜರ್ ಮಲ್ಲಿಕಾರ್ಜುನ್ ಹಿಂದೇಟು ಹಾಕಿದ್ದಾರೆ.