ಸಿದ್ದರಾಮಯ್ಯ ನನ್ನ ಮೊದಲ ಶತ್ರು, ಏನೇ ಆದರೂ ನನ್ನದೆ ಗೆಲುವು: ಸಿಟ್ಟಿಗೆದ್ದ ಶಾಸಕ

First Published 6, Mar 2018, 4:31 PM IST
MLA anger against CM siddaramaiah
Highlights

ಸಿಟ್ಟಿಗೆದ್ದ ಶಾಸಕ

ಕೋಲಾರ(ಮಾ.06):  ನನ್ನ ಮೊದಲ ಶತ್ರು ಸಿದ್ದರಾಮಯ್ಯ ಎಂದು ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಸಿಎಂ ವಿರುದ್ಧ ಸಿಟ್ಟಿಗೆದ್ದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಕೋಲಾರದಲ್ಲಿ ಕಾಂಗ್ರೆಸ್ ಇಲ್ಲ, ನನ್ನ ವಿರುದ್ಧ ಕುರುಬರನ್ನ ನಿಲ್ಲಿಸಲು ಹೋರಾಡ್ತಿದ್ದಾರೆ. ಚಿಕ್ಕರಾಯಪ್ಪ ಬೆಂಗಳೂರಿನಲ್ಲಿ ಲೂಟಿ ಮಾಡಿಕೊಂಡಿದ್ದ ಸಿದ್ದರಾಮಯ್ಯ ಏಜೆಂಟ್. ಎಂಟಿಬಿ ನಾಗರಾಜ್ ಊರು ಬಿಟ್ಡು ಓಡಿ ಹೋದರು. ನನ್ನ ವಿರುದ್ಧ ಏನೇ ಷಡ್ಯಂತ್ರ ಮಾಡಿದರೂ ಆಗಲ್ಲ'ಎಂದು ಮುಖ್ಯಮಂತ್ರಿ ವಿರುದ್ಧ ಗುಡುಗಿದರು.

ಕಳೆದ ಬಾರಿ ಅಲ್ಪಸಂಖ್ಯಾತರು ಕಾಂಗ್ರೆಸ್ ಬಳಿ ಇದ್ದರು. ಈ ಬಾರಿ ನನ್ನ ಬಳಿ ಬಂದಿದ್ದಾರೆ. ಜನರು ಉತ್ಸುಕರಾಗಿದ್ದಾರೆ. ಮುಂದಿನ ದಿನ ಹಳ್ಳಿಗಳು ಸೇರಿದಂತೆ ಎಲ್ಲೆಡೆ ಓಡಾಡುತ್ತೇನೆ. ಜೆಡಿಎಸ್'ನವರು ದುಡ್ಡು ಇರುವವರನ್ನ ಹುಡುಕುತ್ತಿದ್ದಾರೆ. ಜನರ ಆಶೀರ್ವಾದ ಇರುವವರೆಗೂ ಗೆಲುವು ನಮ್ಮದೆ. ಜೆಡಿಎಸ್ ಗೊಂದಲ ಗೂಡಾಗಿದೆ. ಹೊಲಿಗೆ ಯಂತ್ರವೇ ನನ್ನ ಚಿಹ್ನೆ. ನಮ್ಮ ಕಾರ್ಯಕರ್ತರು ಏನಾದರೂ ಮನಸ್ಥಾಪ ಇದ್ದರೆ ಕ್ಷಮಿಸಿ ಹಾಗೂ ಬೆಂಬಲಿಸಿ ಎಂದು ಮನವಿ ಮಾಡಿದರು.

ವಿರೋಧಿಗಳ ಬಗ್ಗೆ ಚಿಂತೆ ಬೇಡ. ನಮ್ಮನ್ನು ಎದುರಿಸುವವರು ಯಾರೂ ಇಲ್ಲ. ಈ ಬಾರಿ ಕೈಗೆ ಬಿಜೆಪಿಗೆ ಸ್ಪಷ್ಟ ಬಹುಮತ ಬರಲ್ಲ. ನಮ್ಮ ಬೆಂಬಲ ಕೇಳ್ತಾರೆ. ಹೊಲಿಗೆ ಯಂತ್ರದ ಅಭ್ಯರ್ಥಿಗಳನ್ನ ಗೆಲ್ಲಿಸಿ. ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಬಲಗೊಳ್ತಿದೆ. 10 ಮಂದಿ ಆದರೂ ಗೆಲ್ಲುತ್ತಾನೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

loader