ಚೆನ್ನೈ : ರಾಷ್ಟ್ರ ರಾಜಕಾರಣದಲ್ಲಿ ಹಲವಾರು ವರ್ಷಗಳ ಕಾಲ ಕಿಂಗ್ ಮೇಕರ್ ಆಗಿದ್ದ ತಮಿಳುನಾಡಿನ ಮೇರು ನಾಯಕ ಕರುಣಾನಿಧಿ ಅವರು ನಿಧನರಾಗಿದ್ದಾರೆ. ಇದೇ ವೇಳೆ ಕರುಣಾ ನಿಧಿ ಅವರ ಪುತ್ರ  ಎಂ.ಕೆ ಸ್ಟಾಲಿನ್ ತಮ್ಮ ತಂದೆಯವರ ಬಗ್ಗೆ ಭಾವನಾತ್ಮಕವಾದ ಪತ್ರವೊಂದನ್ನು ಬರೆದಿದ್ದಾರೆ. 

ಕೊನೆಯ ಬಾರಿ ನಾನು ನಿಮ್ಮನ್ನು ಅಪ್ಪಾ ಎಂದು ಕರೆಯಬಹುದೇ ಎಂದು ಬರೆದುಕೊಂಡಿದ್ದಾರೆ. ಅದನ್ನು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರೆ. ಒಟ್ಟು 5 ಬಾರಿ ಮುಖ್ಯಮಂತ್ರಿಯಾಗಿದ್ದ ಅವರು 50 ವರ್ಷಗಳ ಕಾಲ ಡಿಎಂಕೆ ಪಕ್ಷದ ಮುಖಂಡರಾಗಿದ್ದರು. 

94ನೇ ವಯಸ್ಸಿನಲ್ಲಿ ನಿಧನರಾದ ತಂದೆಯವರ ಬಗ್ಗೆ ಬರೆದುಕೊಂಡ ಸ್ಟಾಲಿನ್ ನಾನು ಜೀವನದಲ್ಲಿ ನಿಮ್ಮನ್ನು ನಾಯಕ ಎಂದೇ ಕರೆದಿದ್ದೇನೆ.  ಕೊನೆಯ ಬಾರಿ ನಾನು ಒಮ್ಮೆ ನಿಮಗೆ ಅಪ್ಪಾ ಎಂದು ಕರೆಯಲೇ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. 

ಅಲ್ಲದೇ ನೀವು ಎಲ್ಲಿಗೆ ತೆರಳಿದರೂ ನನಗೆ ಹೇಳಿಯೇ ಹೋಗುತ್ತಿದ್ದಿರಿ ಆದರೆ ಈ ಬಾರಿ ನನಗೆ ಹೇಳದೇ  ಹೋಗಿದ್ದೀರಿ ಎಂದು ತಮ್ಮ ಪತ್ರದಲ್ಲಿ  ಭಾವನೆಗಳನ್ನು ಹಂಚಿಕೊಂಡಿದ್ದಾರೆ. 

94ವರ್ಷದ ಕರುಣಾನಿಧಿ ಅವರು ವಯೋ ಸಹಜ ಅನಾರೋಗ್ಯದಿಂದ ಮಂಗಳವಾರ ನಿಧನರಾಗಿದ್ದಾರೆ.