ರಾಜ್ಯಾದ್ಯಂತ ಎಲ್ಲ ಕ್ಲಿನಿಕ್ ಸ್ಥಗಿತಗೊಂಡಿವೆ. ಕಿಮ್ಸಲ್ಲಿ ಎಂಸಿಐ ಪರಿಶೀಲನೆ ನಡೆಯುತ್ತಿದ್ದು ಓಪಿಡಿ ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಇಲ್ಲಿನ ಆಡಳಿತ ಮಂಡಳಿ ಹೇಳಿದೆ

ಬೆಂಗಳೂರು(ಜ.2): ರಾಜ್ಯಾದ್ಯಂತ ಎಲ್ಲ ಕ್ಲಿನಿಕ್ ಸ್ಥಗಿತಗೊಂಡಿವೆ. ಕಿಮ್ಸಲ್ಲಿ ಎಂಸಿಐ ಪರಿಶೀಲನೆ ನಡೆಯುತ್ತಿದ್ದು ಓಪಿಡಿ ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಇಲ್ಲಿನ ಆಡಳಿತ ಮಂಡಳಿ ಹೇಳಿದೆ.

ಇದು ದೇಶದ್ಯಾಂತ ಪ್ರತಿಭಟನೆ ನಡೆಯುತ್ತಿದೆ. ಫನಾ ಹಾಗೂ ಐಎಂಎ ಮಧ್ಯೆ ಯಾವುದೇ ಮನಸ್ತಾಪ ಇಲ್ಲ ಎಲ್ಲರೂ ನೈತಿಕ ಬೆಂಬಲ ನೀಡಿದ್ದಾರೆ ಎಂದು ವೈದ್ಯ ಸಂಘಟನೆಗಳು ಹೇಳಿವೆ.

ಇನ್ನು ಇಂದು ಸಂಜೆ ಮತ್ತೆ ಎಲ್ಲರೂ ಸಭೆ ನಡೆಸಿ ಮುಂದಿನ ನಿರ್ಣಯ ಕೈಗೊಳ್ಳಲಿದ್ದೇವೆ. ರಾಷ್ಟ್ರೀಯ ವೈದ್ಯಕೀಯ ಆಯೋಗ ಇಡೀ ವೈದ್ಯ ಕ್ಷೇತ್ರವನ್ನು ಹಾಳುಮಾಡಲಿದೆ. ನಮ್ಮ ಹೋರಾಟ ಹೀಗೆ ಮುಂದುವರೆಯುತ್ತದೆ ಎಂದು ಬೆಂಗಳೂರು ವಿಭಾಗದ ಐಎಂಎ ಅಧ್ಯಕ್ಷ ಡಾ ಶ್ರೀನಿವಾಸ ಹೇಳಿದ್ದಾರೆ.