ಬೆಂಗಳೂರು[ಮೇ. 30] ಒಟ್ಟು 58 ಜನರು ಕೇಂದ್ರ ಸಚಿವರಾಗಿ ನರೇಂದ್ರ ಮೋದಿ ಅವರೊಂದಿಗೆ ಪ್ರಮಾಣ ತೆಗೆದುಕೊಂಡಿದ್ದಾರೆ. ಅಚ್ಚರಿಯ ಸಂಪುಟದಲ್ಲಿ ಕಳೆದ ಸಾರಿ ಪ್ರಭಾವಿ ಸಚಿವರು ಎಂದು ಕರೆಸಿಕೊಂಡವರು ಸ್ಥಾನ ಕಳೆದುಕೊಂಡಿದ್ದಾರೆ.

ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ ಆರೋಗ್ಯ ಸಮಸ್ಯೆ ಕಾರಣಕ್ಕೆ ನನಗೆ ಮಂತ್ರಿ ಗಿರಿ ಬೇಡ ಎಂದು ಮೊದಲೇ ಹೇಳಿದ್ದರು. ಮೋದಿ ಮತ್ತು ಅಮಿತ್ ಶಾ ಜೋಡಿ ಕೆಲ ಅಚ್ಚರಿ ಆಯ್ಕೆಯನ್ನು ಮಾಡಿದೆ.

ಮೋದಿ ಹೊಸ ಟೀಂ.. ಯಾರ್ಯಾರಿಗೆಲ್ಲೆ ಅವಕಾಶ?

ಹಾಗಾದರೆ ಕಳೆದ  ಸಾರಿ ಇದ್ದು ಈ ಬಾರಿ ಸ್ಥಾನ ಗಿಟ್ಟಿಸಲು ಯಾರೆಲ್ಲ ಪ್ರಮುಖರಿಗೆ ಸಾಧ್ಯವಾಗಿಲ್ಲ... ಇಲ್ಲೊಂದು ಪಟ್ಟಿ ಇದೆ

1. ಮನೇಕಾ ಗಾಂಧಿ[ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದರು]

2. ಸುರೇಶ್ ಪ್ರಭು [ರೈಲ್ಚೆ ಸಚಿವರಾಗಿದ್ದರು] 

3. ಸುಷ್ಮಾ ಸ್ವರಾಜ್[ವಿದೇಶಾಂಗ ಸಚಿವರಾಗಿದ್ದರು] 

4. ರಾಜ್ಯವರ್ಧನ್ ಸಿಂಗ್ ರಾಥೋಡ್[ಕ್ರೀಡಾ ಇಲಾಖೆ ರಾಜ್ಯ ಖಾತೆ ಸಚಿವ]

5. ಉಮಾ ಭಾರತಿ[ ಕ್ಲೀನ್ ಗಂಗಾ ಜವಾಬ್ದಾರಿ]

6. ಅನಂತ್ ಕುಮಾರ್ ಹೆಗಡೆ[ಕೌಶಲ್ಯಾಭಿವೃದ್ಧಿ ರಾಜ್ಯ ಖಾತೆ ಸಚಿವ] 

ಇದಲ್ಲದೆ, ಗೋಪಿನಾಥ್ ಮುಂಡೆ, ಬೀರೇಂದ್ರ ಸಿಂಗ್ ಚೌದರಿ, ಕಲರಾಜ್ ಮಿಶ್ರಾ,  ಅಶೋಕ್ ಗಜಪತಿ, ಅನಂತ ಗೀತೆ, ಬಂಡಾರು ದತ್ತಾತ್ರೇಯ, ರಾಧಾ ಮೋಹನ್ ಸಿಂಗ್, ಪ್ರಕಾಶ್ ನಡ್ಡಾ, ಸಂತೋಷ್ ಕುಮಾರ್ ಗಂಗ್ವಾರ್, ಮಹೇಶ್ ಶರ್ಮಾ, ಮನೋಜ್ ಸಿನ್ಹಾ, ವಿಜಯ್ ಗೋಯೆಲ್, ರಾಂ ಕಪಿಲ್ ಯಾದವ್, ಎಂಜೆ ಅಕ್ಬರ್ ಸಹ ಅವಕಾಶ ಕಳೆದುಕೊಂಡಿದ್ದಾರೆ.