ಕೆಇಬಿ ರಸ್ತೆಯಲ್ಲಿರುವ ಡಾ.ಆಶಾ ಹಣಮಶೆಟ್ಟಿ ಅವರ ಮೊಮ್ಮಗ ಲಕ್ಷ್ಯ ಪ್ರವೀಣ ಮತ್ತು ಈತನ ಕ್ಲಾಸ್ ಮೇಟ್ ಗಳಾದ ಕರಣ್ , ವಿನೀತ್ ಈ ಮೂವರು ದಿ ಹನಿ ಬೀಸ್ ಪಬ್ಲಿಕ್ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದರು.
ಬೀದರ್(ಸೆ.01): ಸಚಿವ ಈಶ್ವರ ಖಂಡ್ರೆ ಹತ್ತಿರದ ಸಂಬಂಧಿ ಸೇರಿದಂತೆ ಮೂವರು ಬಾಲಕರು ನಿನ್ನೆ ಶಾಲೆಯಿಂದ ಮನೆಗೆ ಬಂದ ನಂತರ ನಾಪತ್ತೆಯಾಗಿ'ದ್ದು ಪಾಲಕರಲ್ಲಿ ಆತಂಕ ಸೃಷ್ಟಿಯಾಗಿತ್ತು.
ಕೊನೆಗೂ ಪೊಲೀಸರ ಸತತ ಪ್ರಯತ್ನದಿಂದ ನಾಪತ್ತೆಯಾದ ಮಕ್ಕಳು ತೆಲಂಗಾಣದ ಹೈದರಾಬಾದ್ ಬಸ್ ನಿಲ್ದಾಣದಲ್ಲಿ ಸಿಕ್ಕಿದ್ದಾರೆ. ಕೆಇಬಿ ರಸ್ತೆಯಲ್ಲಿರುವ ಡಾ.ಆಶಾ ಹಣಮಶೆಟ್ಟಿ ಅವರ ಮೊಮ್ಮಗ ಲಕ್ಷ್ಯ ಪ್ರವೀಣ ಮತ್ತು ಈತನ ಕ್ಲಾಸ್ ಮೇಟ್ ಗಳಾದ ಕರಣ್ , ವಿನೀತ್ ಈ ಮೂವರು ದಿ ಹನಿ ಬೀಸ್ ಪಬ್ಲಿಕ್ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದರು. ಶಾಲೆಯಿಂದ ಮನೆಗೆ ಬಂದ ತಕ್ಷಣವೇ ಎಲ್ಲರೂ ಹೋಗಿದ್ದಾರೆ. ಪಾಲಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಕೊನೆಗೂ ಮಧ್ಯರಾತ್ರಿ ಯೇ ಮಕ್ಕಳು ಪತ್ತೆಯಾಗಿದ್ದಾರೆ.
