ಇದೀಗ ಚಿಲ್ಲರ್ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ಯೂಟ್ಯೂಬ್ ನಲ್ಲಿ ಕೇವಲ 3ದಿನಗಳಲ್ಲಿ 15ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಇತ್ತೀಚೆಗೆ ಚೀನಾದಲ್ಲಿ ನಡೆದ 2017ನೇ ಸಾಲಿನ ವಿಶ್ವಸುಂದರಿ ಪಟ್ಟ ಗಿಟ್ಟಿಸಿಕೊಂಡಿದ್ದ ಹರ್ಯಾಣ ಮೂಲದ ಮಾನುಷಿ ಚಿಲ್ಲರ್ ಅವರ ಡ್ಯಾನ್ಸ್ ವಿಡಿಯೋ ಈಗ ವೈರಲ್ ಆಗಿದೆ. 2000ನೇ ಇಸವಿಯಲ್ಲಿ ಪ್ರಿಯಾಂಕಾ ಚೋಪ್ರಾ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ರು. ಈಗ 17 ವರ್ಷಗಳ ಬಳಿಕ ಭಾರತದ ಮುಡಿಗೆ ವಿಶ್ವಸುಂದರಿ ಪಟ್ಟ ಸಿಕ್ಕದೆ. ಇನ್ನೂ ಈ ಸಮಾರಂಭದಲ್ಲಿ ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ನಟಿಸಿದ ರಾಮ್ ಲೀಲಾ ಸಿನಿಮಾದ ಹಾಡಿಗೆ ಚಿಲ್ಲರ್ ಸೇರಿದಂತೆ ಇತರ ಸ್ಪರ್ಧಿಗಳು ನರ್ತಿಸಿದ್ದು ವಿಶೇಷವಾಗಿತ್ತು. ಇದೀಗ ಚಿಲ್ಲರ್ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ಯೂಟ್ಯೂಬ್ ನಲ್ಲಿ ಕೇವಲ 3ದಿನಗಳಲ್ಲಿ 15ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.