ಉಬರ್‌ ಕ್ಯಾಬ್‌ ಬುಕ್‌ ಮಾಡಲು ನೆರವು ನೀಡುವ ನೆಪದಲ್ಲಿ ವೃದ್ಧರಿಗೆ ಇದೆಂಥಾ ಮೋಸ..!

ಬೆಂಗಳೂರು. ಅ.11: ಉಳಿಸಲು ಹೋಗಿ ಸೈಬರ್‌ ವಂಚನಿಗೆ ಹಿರಿಯ ನಾಗರಿಕರೊಬ್ಬರು 18 ಸಾವಿರ ತೆತ್ತಿರುವ ಘಟನೆ ಕಾಡುಗೋಡಿಯಲ್ಲಿ ನಡೆದಿದೆ.

ಸಾದರಮಂಗಲ ನಿವಾಸಿ ಸಂತೋಷ್‌ ಕುಮಾರ್‌ ಸಿಂಗ್‌ ಹಣ ಕಳೆದುಕೊಂಡವರು. ಉಬರ್‌ ಕ್ಯಾಬ್‌ ಬುಕ್‌ ಮಾಡಲು ನೆರವು ನೀಡುವ ನೆಪದಲ್ಲಿ ವೃದ್ಧರಿಗೆ ದುಷ್ಕರ್ಮಿ ವಂಚಿಸಿದ್ದು, ಈ ಸಂಬಂಧ ಕಾಡುಗೋಡಿ ಠಾಣೆಗೆ ಅವರು ದೂರು ಕೊಟ್ಟಿದ್ದಾರೆ. 

ಈಗ ವಂಚನಿಗೆ ಬ್ಯಾಂಕ್‌ ವಿವರ ಸಂಗ್ರಹಿಸಿ ಪೊಲೀಸರು ಬಲೆ ಬೀಸಿದ್ದಾರೆ. ನಾನು ಖಾಸಗಿ ಕಂಪನಿಯೊಂದರಲ್ಲಿ ಮುಖ್ಯ ಎಂಜಿನಿಯರ್‌ ಆಗಿ ನಿವೃತ್ತಿ ಹೊಂದಿ ಬಳಿಕ ಸಾದರಮಂಗಲದಲ್ಲಿ ನೆಲೆಸಿದ್ದೇನೆ. ಸಾಮಾನ್ಯವಾಗಿ ಹೊರಗೆ ಓಡಾಡಲು ಕ್ಯಾಬ್‌ನ್ನು ಬಳಸುತ್ತೇನೆ. ಇದಕ್ಕಾಗಿ ಮೊಬೈಲ್‌ನಲ್ಲಿ ಉಬರ್‌ ಆ್ಯಪ್‌ ಸಹ ಡೌನ್‌ಲೋಡ್‌ ಮಾಡಿ ಇಟ್ಟಿದ್ದೇನೆ. ಆದರೆ ಅ.2 ರಂದು ಆ್ಯಪ್‌ ಲಾಕ್‌ ಆಗಿತ್ತು. 

ಹೀಗಾಗಿ ಕಂಪನಿಯ ವೆಬ್‌ಸೈಟ್‌ ಪರಿಶೀಲಿಸಿದಾಗ ಸಹಾಯವಾಣಿ ಸಂಖ್ಯೆ (620629352) ಸಿಕ್ಕಿತು. ಈ ಸಂಖ್ಯೆಗೆ ಕರೆ ಮಾಡಿದಾಗ ವ್ಯಕ್ತಿಯೊಬ್ಬ, ತನ್ನನ್ನು ರಾಹುಲ್‌ ಕುಮಾರ್‌ ತ್ರಿಪಾಠಿ ಎಂದು ಪರಿಚಯಿಸಿಕೊಂಡ.

ಆ್ಯಪ್‌ ಅನ್‌ಲಾಕ್‌ ಮಾಡಲು .10 ದಂಡ ಕಟ್ಟಬೇಕು ಎಂದು ಲಿಂಕ್‌ ಕಳುಹಿಸಿದ್ದ ಮಾಹಿತಿ ಪಡೆದು ಮೊಬೈಲ್‌ಗೆ ಬಂದಿರುವ ಒಟಿಪಿ ಪಡೆದು ನನ್ನ ಬ್ಯಾಂಕ್‌ ಖಾತೆಯಿಂದ .18 ಸಾವಿರ ದೋಚಿದ್ದಾನೆ ಎಂದು ದೂರು ದಾಖಲಿಸಿದ್ದಾರೆ.