* ಬೆಂಗಳೂರಿನ ಜೆಸಿ ನಗರದ ಟಿವಿ ಟವರ್ ಬಳಿ ಕನ್ನಡ ಧ್ವಜ ಕಂಬ ಕೆಡವಲು ಯತ್ನ* ಈ ಹಿಂದೆಯೂ ಕನ್ನಡ ಧ್ವಜ ಕಂಬವನ್ನು ಕೆಡವಲಾಗಿತ್ತು  * ಮತ್ತೆ ಹೊಸದಾಗಿ ಕಂಬವನ್ನು ನಿಲ್ಲಿಸಿದ್ದ ಯುವಕ ಸಂಘ  * ಘಟನಾ ಸ್ಥಳಕ್ಕೆ ಕನ್ನಡಪರ ಸಂಘಟನೆಗಳ ಆಗಮನ

ಬೆಂಗಳೂರು(ಜುಲೈ 23): ಕನ್ನಡ ವಿರೋಧಿ ದುಷ್ಕರ್ಮಿಗಳು ನಗರದಲ್ಲಿ ಮತ್ತೊಮ್ಮೆ ಆಟಾಟೋಪ ಮೆರೆದಿದ್ದಾರೆ. ಜೆಸಿ ನಗರದ ಟಿವಿ ಟವರ್ ಬಳಿ ಕನ್ನಡ ಧ್ವಜದ ಕಂಬವನ್ನು ಕೆಡವುವ ಪ್ರಯತ್ನ ನಡೆದಿರುವುದು ಬೆಳಕಿಗೆ ಬಂದಿದೆ. ಧ್ವಜಸ್ತಂಭ ಆ್ಯಸಿಡ್ ಹಾಕಿ ನಾಶ ಮಾಡಲು ಯತ್ನಿಸಲಾಗಿದೆ. ಸಮೀಪದ ಅಪಾರ್ಟ್'ಮೆಂಟ್'ನ ನಿವಾಸಿಗಳು ಈ ಕೃತ್ಯ ಎಸಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕನ್ನಡಪರ ಸಂಘಟನೆಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾಋಎ.

ಈ ಹಿಂದೆಯೂ ಇದೇ ಕನ್ನಡ ಧ್ವಜ ಕಂಬವನ್ನು ಕೆಡವಲಾಗಿತ್ತು. ಆದರೆ, ಏರಿಯಾದ ಯುವಕರ ಸಂಘವು ಹೊಸ ಕಂಬವನ್ನು ನೆಟ್ಟಿತ್ತು. ಇದೀಗ, ಮತ್ತೊಮ್ಮೆ ಕಂಬವನ್ನು ಕಿತ್ತುಹಾಕಲು ಯತ್ನಿಸಿರುವುದು ಕನ್ನಡ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.