ಟೆಕ್ಸಾಸ್ (ಆ. 23): ಅಮೆರಿಕದ ಟೆಕ್ಸಾಸ್‌ ಯುವತಿಯೊಬ್ಬರು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್‌ ಆಗಿದ್ದಾರೆ. ಕಾರಣ ಕೇಳಿದ್ರೆ, ನೀವು ಒಂದು ಕ್ಷಣ ಹೌಹಾರುತ್ತೀರಿ.

ಹೌದು, ವಜ್ರದ ಉದ್ಯಾನವನ ಎಂದೇ ಪ್ರಖ್ಯಾತಗೊಂಡಿರುವ ಅರ್ಕಾನ್ಸಸ್‌ಗೆ ಬಂದ ಯುವತಿ ಒಂದು ಗಂಟೆಗಳ ಕಾಲ ವಜ್ರಕ್ಕಾಗಿ ಶೋಧಿಸಿದ್ದಾರೆ. ಆದರೆ, ಯಾವುದೇ ವಜ್ರ ಪತ್ತೆಯಾಗಿಲ್ಲ.

ಬಡಕಲು ಆನೆ ಬಳಸಿ ಶ್ರೀಲಂಕಾದಲ್ಲಿ ಪರೇಡ್!

ಈ ವೇಳೆ ಬೇಸತ್ತ ಮಿರಂಡಾ ಹೊಲಾಂಗ್‌ಶೆಡ್‌ (27) ಎಂಬ ಯುವತಿ, ವಜ್ರ ಶೋಧಿಸುವುದು ಹೇಗೆಂಬ ವಿಡಿಯೋ ವೀಕ್ಷಿಸಲು ಶುರು ಮಾಡಿದ್ದು, ಇದೇ ವೇಳೆ ತನಗೆ 3.72 ಕ್ಯಾರೆಟ್‌ ವಜ್ರ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾಳೆ. ಈ ಹಿನ್ನೆಲೆ ಯುವತಿ ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದ್ದಾರೆ.