ಸುವರ್ಣನ್ಯೂಸ್ ಜೊತೆ ಮಾತನಾಡಿದ ಮಂದಿರದ ಮ್ಯಾನೇಜರ್ ಸುಧನ್ವ, ಇದು ಬೆಳಕಿನ ಆಟವಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೈಸೂರು(ಫೆ. 28): ಸಾಯಿಬಾಬಾನಿಗೂ ಪವಾಡಕ್ಕೂ ಎಲ್ಲಿಲ್ಲದ ನಂಟು. ಇದಕ್ಕೆ ಇಲ್ಲೊಂದು ನಿದರ್ಶನ ಗೋಚರವಾಗಿದೆ. ಹುಣುಸೂರು ಪಟ್ಟಣದ ಸಾಯಿಬಾಬಾ ಮಂದಿರದಲ್ಲಿ ಬಾಬಾ ವಿಗ್ರಹದ ಮುಂದೆ ಬೆಳಕಿನ ಮೂರ್ತಿಯೊಂದು ಮೂಡಿದ್ದು ವಿಸ್ಮಯಕ್ಕೆ ಕಾರಣವಾಗಿದೆ. ಹಳೇ ಬಿ.ಎಂ. ರಸ್ತೆಯ ಶಿರಡಿ ಸಾಯಿ ಮಂದಿರದಲ್ಲಿ ಈ ಅಚ್ಚರಿ ಮೂಡಿದ್ದು, ಬೆಳಕಿನಲ್ಲಿ ಸಾಯಿಬಾಬಾ ಆಕೃತಿ ಗೋಚರಿಸಿದೆ. ಯಾರ ಕಣ್ಣಿಗೂ ಗೋಚರಿಸದ ಈ ಆಕೃತಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯವೈಭವ 15 ಸೆಕೆಂಡುಗಳ ಕಾಲ ಇದೆ. ಸ್ವತಃ ಸಾಯಿಬಾಬಾನೇ ಪ್ರತ್ಯಕ್ಷರಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸೋಮವಾರ ಬೆಳಗ್ಗೆ 7.40ರ ಸಮಯದಲ್ಲಿ ಸಾಯಿ ಬಾಬಾ ಮೂರ್ತಿಯ ಮುಂದೆ ಅಗೋಚರ ಬೆಳಕೊಂದು ಕಂಡಿದೆ. ದೇವಸ್ಥಾನದಲ್ಲಿನ ವ್ಯವಸ್ಥಾಪಕರು ಆ ಸ್ಥಳಕ್ಕೆ ನೋಡಿದಾಗ ಆ ದೃಶ್ಯ ಕಾಣುತ್ತಿಲ್ಲ. ಆದರೆ, ಬಾಬಾ ಭಕ್ತರ ಮಹಾಪೂರವೇ ಈ ಮಂದಿರಕ್ಕೆ ಲಗ್ಗೆ ಇಡುತ್ತಿದೆ.

ಸುವರ್ಣನ್ಯೂಸ್ ಜೊತೆ ಮಾತನಾಡಿದ ಮಂದಿರದ ಮ್ಯಾನೇಜರ್ ಸುಧನ್ವ, ಇದು ಬೆಳಕಿನ ಆಟವಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.