ಜಮ್ಕಾ ಮಖಾನ್‌ ಗೋರಿಯ ಚಾದರ್‌ನಲ್ಲಿ ಉಸಿರಾಟದ ಅನುಭವವಾಗಿದ್ದು ಜನರಲ್ಲಿ ಕುತೂಹಲ ಮೂಡಿಸಿದ ಘಟನೆ ಪಟ್ಟಣದ ಹೊಳೆ ಬೀದಿಯಲ್ಲಿರುವ ಹಜರತ್‌ ದರ್ಗಾದಲ್ಲಿ ನಡೆದಿದೆ.
1914ರಲ್ಲಿ ಹಜರತ್ ದರ್ಗಾ ನಿರ್ಮಾಣವಾಗಿದ್ದು ಇದರಲ್ಲಿ ಗುಲ್ಜಾರ್ ಅಲೀಷ್, ಚಮಾಷ ವಲೀಬಾ, ಸೈದಾನಿ ಮೋಬಿ ಎಂಬ ಮೂರು ಮಹಾತ್ಮರ ಸಮಾಧಿಗಳಿವೆ. ಬುಧವಾರ ರಾತ್ರಿ ಹಿಂದೂ ಧರ್ಮೀಯ ಮಹಿಳೆಯೊಬ್ಬಳು ತಾಯತ ಕಟ್ಟಿಸಿಕೊಳ್ಳಲು ದರ್ಗಾಗೆ ಆಗಮಿಸಿದಾಗ ಮೂರು ಗೋರಿಗಳ ಚಾದರ ಅಲುಗಾಡಿದೆ. ಇದನ್ನು ಸಾವಿರಾರು ಮಂದಿ ದರ್ಗಾಗೆ ಬಂದ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಯಿತು.
ಗುರುವಾರ ಬೆಳಗ್ಗೆ ಆಗಮಿಸಿದ ಜಿಲ್ಲಾಧಿಕಾರಿ ಜಿಯಾವುಲ್ಲಾ ಗೋರಿ ಮೇಲಿನ ಚಾದರ ತೆಗೆದು ಉಸಿರಾಟವನ್ನು ಪರಿಶೀಲಿಸುವಂತೆ ಗೋರಿಯ ಉಸ್ತುವಾರಿ ನೋಡಿಕೊಳ್ಳುವವರಿಗೆ ಹೇಳಿದರು. ಆದರೆ ಅದು ನಮ್ಮ ಸಂಪ್ರದಾಯ ಮತ್ತು ಭಾವನೆಗಳಿಗೆ ವಿರುದ್ಧವಾಗಿದೆ ಎಂದು ದರ್ಗಾದ ಮೌಲ್ವಿಗಳು ಚಾದರದ ಬಟ್ಟೆಯನ್ನು ತೆಗೆಯುವುದಕ್ಕೆ ನಿರಾಕರಿಸಿದರು.
