ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ದೊರೆಯದವರಲ್ಲಿ ಅತೃಪ್ತಿ ಇರುವುದು ನಿಜ. ಎಲ್ಲಾ ಶಾಸಕರಿಗೂ ಅವಕಾಶ ದೊರೆಯುವಂತೆ ಮಾಡಲು ‘2+2+1’ ಫಾರ್ಮುಲಾ ರೂಪಿಸಿರುವುದಾಗಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಹೇಳಿದ್ದಾರೆ.

ಬೆಂಗಳೂರು : ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ದೊರೆಯದವರಲ್ಲಿ ಅತೃಪ್ತಿ ಇರುವುದು ನಿಜ. ಎಲ್ಲಾ ಶಾಸಕರಿಗೂ ಅವಕಾಶ ದೊರೆಯುವಂತೆ ಮಾಡಲು ‘2+2+1’ ಫಾರ್ಮುಲಾ ರೂಪಿಸಿರುವುದಾಗಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಸಚಿವರಾದವರ ಕಾರ್ಯವೈಖರಿಯನ್ನು ಹೈಕಮಾಂಡ್‌ ಮೌಲ್ಯಮಾಪನ ಮಾಡಲಿದೆ. ಉತ್ತಮವಾಗಿ ಕಾರ್ಯ ನಿರ್ವಹಿಸದವರ ಸಚಿವ ಸ್ಥಾನವನ್ನು ಹಿಂಪಡೆದು ಅತೃಪ್ತರಿಗೆ ನೀಡಲಾಗುವುದು. ಉಳಿದಂತೆ ಮೊದಲು ಸಚಿವರಾದವರಿಗೆ 2 ವರ್ಷ, ಬಳಿಕ ಸಚಿವರಾದವರಿಗೆ 2 ವರ್ಷದಂತೆ ಅಧಿಕಾರ ಹಂಚಿಕೆ ಮಾಡಿ ಎಲ್ಲರಿಗೂ ಅವಕಾಶ ದೊರೆಯುವಂತೆ ಮಾಡಲಾಗುವುದು ಎಂದು ಹೇಳಿದರು.

ಈ ಮೂಲಕ ‘2+2+1’ ಫಾರ್ಮುಲಾ ಮೊರೆ ಹೋಗಿರುವುದಾಗಿ ಪರೋಕ್ಷವಾಗಿ ಮಾಹಿತಿ ನೀಡಿದರು. ಪ್ರಸ್ತುತ ಸಚಿವ ಸ್ಥಾನದ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಎಲ್ಲರಿಗೂ ಒಟ್ಟಿಗೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ. ಈ ಬಗ್ಗೆ ಎಲ್ಲರಿಗೂ ಮನವರಿಕೆ ಮಾಡಿಕೊಟ್ಟಿದ್ದು, ಶಾಸಕರು ಹಾಗೂ ಮುಖಂಡರು ಸನ್ನಿವೇಶ ಅರ್ಥ ಮಾಡಿಕೊಂಡಿದ್ದಾರೆ. ಈಗ ಸಚಿವರಾಗುವವರು ಎರಡು ವರ್ಷ ಸಚಿವರಾಗಿ ಇರಲಿದ್ದಾರೆ. ನಂತರ ಇತರರಿಗೆ ಅವಕಾಶ ಮಾಡಿಕೊಡಲಿದ್ದಾರೆ. ಹೀಗಾಗಿ ಎಲ್ಲಾ ಗೊಂದಲಗಳೂ ಬಗೆಹರಿದಿವೆ ಎಂದರು.