ಬೆಂಗಳೂರು(ಸೆ.21) :ಅಂತಿಮ ಕ್ಷಣದಲ್ಲಿ ಪ್ರಧಾನಿ ಮೋದಿ ಕೊನೆಗೂ ಕಾವೇರಿ ಸಂಕಷ್ಟಕ್ಕೆ ಕಿವಿಗೊಟ್ಟಿದ್ದಾರೆ. ಪ್ರಧಾನಿಯವರ ಜೊತೆ ಅನಂತ್ ಕುಮಾರ್, ಸದಾನಂದ ಗೌಡ ಹಾಗೂ ನಿರ್ಮಲಾ ಸೀತಾರಾಮನ್​ ಭೇಟಿ ಮಾಡಿ 10 ನಿಮಿಷ ಕಾಲ ಕಾವೇರಿ ಸಂಕಷ್ಟದ ಕುರಿತು ಪ್ರಧಾನಿಗೆ ವಿವರಣೆ ನೀಡಿದ್ದಾರೆ. ಮೂವರು ಸಚಿವರು ಪ್ರಧಾನಿಯವರಿಗೆ ಮನವಿ ಮಾಡಿ, ನೀವೇ ಈಗ ರಾಜ್ಯದ ಜನತೆಯ ಹಿತಾಸಕ್ತಿ ಕಾಪಾಡಬೇಕು ಎಂದು ತಿಳಿಸಿದ್ದಾರೆ.

ಮೋದಿ ಸೂಚನೆ ಹಿನ್ನೆಲೆಯಲ್ಲಿ ಕಾವೇರಿ ವಿವರ ಪಡೆದ ಉಮಾಭಾರತಿ ಮೂವರು ಸಚಿವರನ್ನು ಭೇಟಿಯಾಗಿ ಸುಮಾರು ಒಂದೂವರೆ ಗಂಟೆ ಕಾಲ ಚರ್ಚೆ ನಡೆಸಿದ್ದಾರೆ. ನಾಳೆ ಕಾವೇರಿ ವಿಚಾರ ಕುರಿತು ಹಣಕಾಸು ಸಚಿವ ಅರುಣ್ ಜೇಟ್ಲಿ, ಕಾನೂನು ಸಚಿವ ರವಿಶಂಕರ್ ಪ್ರಸಾದ್ ಜೊತೆ ಸಭೆ ಹಾಗೂ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಜೊತೆಯೂ ಚರ್ಚೆ ಸಾಧ್ಯತೆಯಿದೆ. ಶುಕ್ರವಾರ ಸಂಜೆಯೊಳಗೆ ಕೇಂದ್ರದ ತೀರ್ಮಾನ ಹೊರಬೀಳುವ ನಿರೀಕ್ಷೆಯಿದೆ.