Asianet Suvarna News Asianet Suvarna News

ರಾಜೀನಾಮೆ ನೀಡುವೆ: ಬಹಿರಂಗ ಹೇಳಿಕೆ ನೀಡಿದ ಕೈ ಸಚಿವ

ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ರಾಜೀನಾಮೆ ಪರ್ವ ಆರಂಭವಾದ ಬೆನ್ನಲ್ಲೇ ಕಾಂಗ್ರೆಸ್‌ನ ಮತ್ತೊಬ್ಬ ಸಚಿವರೂ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ. ಯಾರು ಆ ಸಚಿವ, ಕಾರಣವೇನು?

Minister Venkataramanappa Threatens to Resign,
Author
Bengaluru, First Published Jul 4, 2019, 11:17 AM IST
  • Facebook
  • Twitter
  • Whatsapp

ಚಿತ್ರದುರ್ಗ [ಜು.04] : ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ಇದೀಗ ರಾಜ್ಯದ ಸಚಿವರೋರ್ವರು ಬಹಿರಂಗ ರಾಜೀನಾಮೆ ಹೇಳಿಕೆ ನೀಡಿದ್ದಾರೆ. 

ಚಿತ್ರದುರ್ಗದಲ್ಲಿ ಭದ್ರಾ ಮೇಲ್ದಂಡೆ ಯೋಜನೆ  ತ್ವರಿತವಾಗಿ  ಮುಗಿಸಲು ಆಗ್ರಹಿಸಿ ಕೈಗೊಂಡಿದ್ದ ಸತ್ಯಾಗ್ರಹದಲ್ಲಿ ಮಾತನಾಡಿದ ಚಿತ್ರದುರ್ಗ ಜಿಲ್ಲೆ ಉಸ್ತುವಾರಿ ಸಚಿವ  ವೆಂಕಟರಮಣಪ್ಪ  ವಾಣಿ ವಿಲಾಸ ಜಲಾಶಯಕ್ಕೆ ಆಗಸ್ಟ್ 10ರ ಒಳಗಾಗಿ ನೀರು ಹರಿಸದೇ ಇದ್ದಲ್ಲಿ  ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ. 

ಹಿರಿಯೂರು ವಕೀಲರ ಸಂಘದಿಂದ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಅವರು  ಜುಲೈ 30ರ ಒಳಗೆ ಮಳೆಯಾಗಲಿದೆ. ನಂತರ ವಾಣಿ ವಿಲಾಸ ಸಾಗರಕ್ಕೆ ನೀರು ಬರಲಿದೆ.  ಆಗಸ್ಟ್ 10ರೊಳಗೆ ನೀರು ಬಾರದಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸ್ಥಾನ ತ್ಯಜಿಸುತ್ತೇನೆ ಎಂದು ಹೇಳಿದ್ದಾರೆ.

ನಾನು ಓರ್ವ ರೈತನ ಮಗನಾಗಿದ್ದು, ಕೊಟ್ಟ ಮಾತನ್ನು ಎಂದಿಗೂ ತಪ್ಪುವುದಿಲ್ಲ ಎಂದು ಪಾವಗಡ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ವೆಂಕಟರಮಣಪ್ಪ ಹೇಳಿದರು.

Follow Us:
Download App:
  • android
  • ios