ಸುವರ್ಣನ್ಯೂಸ್​​​​ನ ವಿನೂತನ ಮತ್ತು ವಿಭಿನ್ನ ಪ್ರಯತ್ನಕ್ಕೆ ಈ ಬಾರಿಯೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹಲೋ ಮಿನಿಸ್ಟರ್ ಕಾರ್ಯಕ್ರಮಕ್ಕೆ ಮೊದಲ ಬಾರಿಗೆ ಮಾತೃ ಹೃದಯದ ಸಚಿವೆ ಉಮಾಶ್ರೀ ಹಲೋ ಮಿನಿಸ್ಟರ್ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸ್ಟುಡಿಯೋದಿಂದಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡುವುದರ ಜೊತೆಗೆ ಹಲವು ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮೊದಲ ಬಾರಿ ಸುವರ್ಣನ್ಯೂಸ್​ನ ಹಲೋ ಮಿನಿಸ್ಟರ್ ಕಾರ್ಯಕ್ರಮಕ್ಕೆ ಬಂದಿದ್ದರು. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರದ ಭರವಸೆ ನೀಡಿದರು. ಮೊದಲು ಕರೆ ಮಾಡಿದ ಗೀತಾ ಗಂಗಾವತಿ ಅಂಗನವಾಡಿಯಲ್ಲಿ 3 ತಿಂಗಳಿಗೆ ಅರ್ಧ ಲೀ.​ ನ್ಯೂಟ್ರಿಶಿಯನ್​ ಪ್ಯಾಕೆಟ್​​​​ ಕೊಡ್ತಾರೆ ಇದು ಸಾಕಾಗಲ್ಲ ಎಂದರು. ಅದಕ್ಕೆ ಸಚಿವೆ ಉಮಾಶ್ರೀ ಸ್ಟುಡಿಯೋದಲ್ಲಿಯೇ ಸ್ಪಷ್ಟನೆ ನೀಡಿದರು.

ಸಮಸ್ಯೆ ಈಡೇರಿಕೆಗೆ ಭರವಸೆ

ಬಾಗಲಕೋಟೆ ಸಂತ್ರಸ್ತರ ವಾರ್ಡ್​​ನ 23ನೇ ಅಂಗನವಾಡಿಯಲ್ಲಿ ಚಿಕ್ಕ ಕೋಣೆಯಲ್ಲಿ 30 ಮಕ್ಕಳಿದ್ದಾರೆ. ಬೇಗ ಸಮಸ್ಯೆ ಬಗೆಹರಿಸಿಕೊಡಿ ಅಂತಾ ಬಸವರಾಜ್​​ ಕರೆ ಮಾಡಿದ್ದರು. ಈ ವೇಳೆ ಸಚಿವೆ ಉಮಾಶ್ರೀ ಸಹಾಯಕ ನಿರ್ದೇಶಕ ಹೊರಬಟ್ಟಿ ಜೊತೆಯೂ ಮಾತನಾಡಿ ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಬಗೆ ಹರಿಸುವಂತೆ ಸೂಚಿಸಿದರು.

ಬೆಂಗಳೂರಿನಿಂದ ಕರೆ ಮಾಡಿದ ವಿಕಲಚೇತನಾ ಮಹಿಳೆ ಭಾರತಿ ಲಕ್ಷ್ಮಿ ನನಗೆ ಯಂತ್ರ ಚಾಲಿತ ವಾಹನ ಕೊಟ್ಟಿಲ್ಲ ಅಂತ ಸಚಿವೆ ಉಮಾಶ್ರೀಗೆ ನೇರವಾಗಿ ಪ್ರಶ್ನೆ ಮಾಡಿದರು. ಅದಕ್ಕೆ ಸಚಿವೆ ಉಮಾಶ್ರೀ ಸ್ಪಷ್ಟನೆ ನೀಡಿದರು. ಕೊನೆಯಲ್ಲಿ ಮಾತನಾಡಿದ ಸ್ನೇಹಿತೆ, ನಟಿ ಜಯಾಮಾಲಾ ಉಮಾಶ್ರೀಗೆ ಅಭಿನಂದನೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಒಟ್ಟಿನಲ್ಲಿ ಜನರ ಸಮಸ್ಯೆಗಳಿಗೆ ಸಚಿವರು ಸ್ಥಳದಲ್ಲೇ ಪರಿಹಾರ ನೀಡುವುದರ ಜೊತೆ ಇನ್ನೂ ಕೆಲವು ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು. ಸುವರ್ಣನ್ಯೂಸ್‌ನ ವಿಭಿನ್ನ ಕಾರ್ಯಕ್ರಮಕ್ಕೆ  ಧನ್ಯವಾದ ಕೂಡ ತಿಳಿಸಿದರು.

-ಜೆ. ಎಸ್​.ಪೂಜಾರ್​​, ಸುವರ್ಣ ನ್ಯೂಸ್