ಸಚಿವರಿಂದ ಜೆಡಿಎಸ್ ಶಾಸಕನ ಸಹೋದರನಿಗೆ 'ಟ್ರಾನ್ಸ್'ಫರ್' ಬೆದರಿಕೆಸೇಡಿನ ರಾಜಕೀಯ ನಡೆಯುತ್ತಿದೆಯೇ ಹಾಸನದಲ್ಲಿ?ಸ್ವಯಂ ನಿವೃತ್ತಿ ಪಡೆದ ಅಧಿಕಾರಿ | ಸಚಿ ವ ಮಂಜು ಫೋನಿನಲ್ಲಿ ಹೇಳಿದ್ದೇನು?ಇಲ್ಲಿದೆ ಸಂಪೂರ್ಣ ಸಂಭಾಷಣೆ
ಬೆಂಗಳೂರು (ಅ.13): ಪಶುಸಂಗೋಪನಾ ಸಚಿವ ಎ.ಮಂಜು ಅಧಿಕಾರಿಯೊಬ್ಬರಿಗೆ ದೂರದ ಊರಿಗೆ ವರ್ಗಾವಣೆ ಮಾಡುವ ಬೆದರಿಕೆ ಹಾಕಿರುವ ಬೆನ್ನಲ್ಲೇ ಸಚಿವರ ಆರೋಪದಿಂದ ನೊಂದಿರುವ ಅಧಿಕಾರಿ ತಮ್ಮ ಹುದ್ದೆಗೆ ರಾಜಿನಾಮೆ ನೀಡಿರುವ ಘಟನೆ ನಡೆದಿದೆ.
ಸಚಿವರು ಕರೆಮಾಡಿ ಮಾತನಾಡಿರುವ ಆಡಿಯೋ ಕ್ಲಿಪ್ ಸುವರ್ಣ ನ್ಯೂಸ್'ಗೆ ದೊರಕ್ಕಿದ್ದು, ಸಚಿವರು ಪಶು-ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ದಾಸ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.
ಮೋಹನ್ ದಾಸ್ ಆರೋಪಗಳನ್ನು ನಿರಾಕರಿಸಿದ್ದಾರಲ್ಲದೇ ಸಚಿವರ ಆರೋಪಗಳಿಂದ ನೊಂದು ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ.
ಮೋಹನ್ ದಾಸ್, ಜೆಡಿಎಸ್ ಶಾಸಕ ಪ್ರಕಾಶ ಅವರ ಸಹೋದರರಾಗಿದ್ದು, ಈ ಬೆಳವಣಿಗೆಯು ಕಾಂಗ್ರೆಸ್ -ಜೆಡಿಎಸ್ ನಡುವಿನ ಸೇಡಿನ ರಾಜಕೀಯದ ಮುಂದುವರಿದ ಭಾಗವೇ ಎಂಬ ಸಂಶಯಗಳು ಮೂಡಿವೆ.
ಮಂಜು ಹಾಗೂ ಮೋಹನ್ ದಾಸ ಸಂಭಾಷಣೆ ಇಲ್ಲಿದೆ:
ಎ ಮಂಜು : ಹಲೋ ಮೋಹನ್ ದಾಸ್
ಅಧಿಕಾರಿ : ಸರ್
ಎ ಮಂಜು : ಮಂತ್ರಿಗಳು ಮಾತಾಡೋದು
ಅಧಿಕಾರಿ : ಹು ಸರ್ ಗೊತ್ತಾಯಿತು ಸರ್
ಎ ಮಂಜು : ಎಲ್ಲಿದಿಯಾ ಪಾ...
ಅಧಿಕಾರಿ : ಇಲ್ಲೆ ಮನೆ ಹತ್ತಿರ ಇದ್ದೇ
ಎ ಮಂಜು : ಕಾರ್ಯಕ್ರಮಕ್ಕೆ ಬಂದಿದ್ದೇಯಾ
ಅಧಿಕಾರಿ : ಸರ್
ಎ ಮಂಜು : ಪಾಲಿಗ್ರಾಮ ಕಾರ್ಯಕ್ರಮಕ್ಕೆ ಬಂದಿದ್ದೇಯಾ
ಅಧಿಕಾರಿ : ಹು ಸರ್ ಬಂದಿದೆ
ಎ ಮಂಜು : ಎನ್ ಎಲ್ಲಾ ಬಂದೊರು ನಿನ್ನ ಬಗ್ಗೆ ಕಂಪ್ಲೇಟ್ ನೀಡತ್ತಾ ಇದ್ದಾರೆ, ಎಲ್ಲರ ಹತ್ತಿರ ಮಾತ್ತಾಡಿ ದುಡ್ಡು ವಸೂಲಿ ಮಾಡತೀಯಾ ಅಂತೇ
ಅಧಿಕಾರಿ : ಸರ್
ಎ ಮಂಜು : ಮೇರಿಟಸ್ರಗೆ ಎಲ್ಲಾ ಮಾತಾಡಿ ದುಡ್ಡು ತಗ್ಗೋಳ್ತಿಯ ಅಂತ ಚಿಟಿ ಬರೆದುಕೊಟ್ಟಿದ್ದಾರೆ ಅಲ್ಲಪಾ
ಅಧಿಕಾರಿ : ಹೌದಾ ಸರ್ , ನನಗೆ ಗೊತ್ತಿಲ್ಲಾ ಸರ್
ಎ ಮಂಜು : ಹೌದು
ಅಧಿಕಾರಿ : ಹೌದಾ ಸರ್ ಹ ಹ ಹ
ಎ ಮಂಜು : ಎನ್ ಈಗ ಎನಕ್ವೈರಿಗೆ ಹಾಕೊದಾ ಎನ್ ಮಾಡೊದು
ಅಧಿಕಾರಿ : ನನಗೆ ಯಾರು ಚೀಟಿ ಬರೆದು ಕೊಟ್ಟಿದ್ದಾರೆ ಅಂತಾ ಗೊತ್ತಾಗಲ್ಲಿಲ್ಲ ಸರ್
ಎ ಮಂಜು : ಯಾರೂ ಬರೆದು ಕೊಟ್ಟಿದ್ದಾರೆ ಅಂತಾ ಹೇಳಿದ್ದರೆ ನೀನು ಸಾಯಂಕಲಾ ಬುಕ್ ಮಾಡಿಕೊಳ್ಳುತ್ತಿಯಾ ಅವರನ್ನು
ಅಧಿಕಾರಿ : ಇಲ್ಲಾ ಸರ್
ಎ ಮಂಜು : ನೀನು ದುಡ್ಡು ಇಸಿಕೊಳ್ಳೊದು ಬುಕ್ ಮಾಡೊದು ಪೋಟೋ ಹೊಡೆದು ಕೊಟ್ಟಿದ್ದಾರೆ
