ಅಗರ್ತಲಾ : ತ್ರಿಪುರಾ ಆರೋಗ್ಯ ಸಚಿವ ಹಾಗೂ ಬಿಜೆಪಿ ನಾಯಕ ಸುದೀಪ್ ರಾಯ್ ಬರ್ಮನ್ ಅವರನ್ನು ಸಂಪುಟದಿಂದ ಕೈ ಬಿಡಲಾಗಿದೆ.  ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಹೊರಹಾಕಲಾಗಿದೆ. 

ಬರ್ಮನ್ ತ್ರಿಪುರಾ ಸರ್ಕಾರದಲ್ಲಿ ಎರಡು ಖಾತೆಗಳನ್ನು ನಿರ್ವಹಿಸುತ್ತಿದ್ದರು.  ಆರೋಗ್ಯ  ಮತ್ತು ಕುಟುಂಬ ಕಲ್ಯಾಣ,  ಐಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಪಬ್ಲಿಕ್ ವರ್ಕ್ ಡಿಪಾರ್ಟ್ ಮೆಂಟ್ ಖಾತೆಗಳನ್ನು ನಿರ್ವಹಿಸುತ್ತಿದ್ದರು. ಇದೀಗ ೆರಡು ಖಾತೆಗಳನ್ನು ಮರಳಿ ಪಡೆದು ರಾಜ್ಯ ಸರ್ಕಾರ ಬರ್ಮನ್ ಅವರಿಗೆ ನೋಟಿಸ್ ನೀಡಿದೆ.  

ಬರ್ಮನ್ ಅವರನ್ನು ಸಂಪುಟದಿಂದ ಕೈ ಬಿಟ್ಟ ಹಿನ್ನೆಲೆ ಪಿಡಬ್ಲ್ಯುಡಿ  ಖಾತೆಯನ್ನು ಮುಖ್ಯಮಂತ್ರಿ ಬಿಪ್ಲಬ್ ದೇವ್ ವಹಿಸಿಕೊಂಡಿದ್ದಾರೆ.  ಆರೋಗ್ಯ ಖಾತೆನ್ನು ಉಪ ಮುಖ್ಯಮಂತ್ರಿ ಜಿಷ್ಣು ದೇವ್ ವಹಿಸಿಕೊಂಡಿದ್ದಾರೆ. 

ಬರ್ಮನ್ ಅವರು ತ್ರಿಪುರಾ ಮಾಜಿ ಸಿಎಂ ಸಮೀರ್ ರಂಜನ್ ಬರ್ಮನ್ ಅವರ ಪುತ್ರರಾಗಿದ್ದು, ಕಳೆದ ವರ್ಷವಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿಯೊಂದಿಗೆ ಕೈ ಜೋಡಿಸಿದ್ದರು. 1998 ರಿಂದ ಅಗರ್ತಲಾ ಕ್ಷೇತ್ರದ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.