ಬೆಂಗಳೂರು[ಜು. 11]  ಬಿಜೆಪಿ ನಾಐಕ ಕೆ.ಎಸ್ ಈಶ್ವರಪ್ಪ ಅವರನ್ನು ಜೆಡಿಎಸ್ ನಾಯಕ ಸಾರಾ ಮಹೇಶ್ ಭೇಟಿ ಮಾಡಿದ್ದಾರೆ ಎನ್ನುವುದು ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಬಿಜೆಪಿ ಹಿರಿಯ ನಾಯಯ ಈಶ್ವರಪ್ಪ ಅವರನ್ನು ಕುಮಾರಸ್ವಾಮಿ ಅವರ ಬಲಗೈ ಎಂದು ಕರೆಸಿಕೊಳ್ಳುವ ಸಾರಾ ಮಹೇಶ್ ಭೇಟಿ ಮಾಡಿರುವುದು ಕುತೂಹಲ ಹೆಚ್ಚಳ ಮಾಡಿದೆ.

ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳೀಧರ್ ಮತ್ತು ಈಶ್ವರಪ್ಪ ಅವರನ್ನು ಭೇಟಿ ಮಾಡಲು ಸಾರಾ ಮಹೇಶ್ ಅವರನ್ನು ಕಳುಹಿಸಿಕೊಟ್ಟವರು ಯಾರು? ಹಾಗಾದರೆ  ಮಹೇಶ್ ಈಶ್ವರಪ್ಪ ಅವರನ್ನು ಭೇಟಿ ಮಾಡಿದ್ದು ಕಾಂಗ್ರೆಸ್ ಹೊರಗಿಡುವ ತಂತ್ರವೇ? ಎಂಬೆಲ್ಲ ವಿಚಾರಗಳು ಚರ್ಚೆಗೆ ವೇದಿಕೆ ಮಾಡಿಕೊಟ್ಟಿದೆ.

ಸುಪ್ರೀಂ ನಿರ್ದೇಶನದಲ್ಲಿ ಸ್ಪೀಕರ್‌ಗೆ ಅರ್ಥವಾಗದ ಅದೊಂದು ಆಂಗ್ಲ ಶಬ್ದ!

ದೋಸ್ತಿ ಸರಕಾರ ಪತನದ ಅಂಚಿಗೆ ಬಂದಿರುವಾಗ ಜೆಡಿಎಸ್ ಮತ್ತು ಬಿಜೆಪಿ ನಾಯಕರ ಭೇಟಿ ಕಾಂಗ್ರೆಸ್ ಗೆ ಬಿಸಿ ಮುಟ್ಟಿಸಿದೆ. ಬಿಜೆಪಿ ನಾಯಕರ ಬಳಿ ಜೆಡಿಎಸ್ ನಾಐಕರನ್ನು ಕಳುಹಿಸಿಕೊಟ್ಟವರು ಯಾರು? ಕುಮಾರಕೃಪಾ ಅತಿಥಿಗೃಹದಲ್ಲಿ ಎರಡು ಪಕ್ಷದ ನಾಯಕರ ನಡುವೆ ನಡೆದ ಮಾತುಕತೆ ಏನು? ಎಂಬೆಲ್ಲ ವಿಚಾರಗಳು ಈಗ ಬಹುಚರ್ಚಿತ ವಿಷಯವಾಗಿದೆ.