ನಾನು ಅಶ್ಲೀಲ ಚಿತ್ರಗಳನ್ನು ನೋಡಿಲ್ಲ, ಡೌನ್ಲೋಡ್ ಮಾಡಿಲ್ಲ. ನನ್ನ ಮೊಬೈಲ್ಗೆ ಅಶ್ಲೀಲ ಚಿತ್ರ ಕಳುಹಿಸಿದವರ ಮೇಲೂ ಕೇಸ್ ಹಾಕ್ತೀನಿ
ರಾಯಚೂರು(ನ.11): ಟಿಪ್ಪು ಜಯಂತಿ ವೇಳೆ ವೇದಿಕೆ ಮೇಲೆ ಅಶ್ಲೀಲ ಚಿತ್ರಗಳನ್ನು ನೋಡಿದ ಸಚಿವ ತನ್ವೀರ್ ಸೇಠ್, ಮಾಧ್ಯಮಗಳ ವಿರುದ್ಧವೇ ಗರಂ ಆಗಿದ್ದಾರೆ. ನಾನು ಅಶ್ಲೀಲ ಚಿತ್ರಗಳನ್ನು ನೋಡಿಲ್ಲ, ಡೌನ್ಲೋಡ್ ಮಾಡಿಲ್ಲ. ನನ್ನ ಮೊಬೈಲ್ಗೆ ಅಶ್ಲೀಲ ಚಿತ್ರ ಕಳುಹಿಸಿದವರ ಮೇಲೂ ಕೇಸ್ ಹಾಕ್ತೀನಿ, ಜೊತೆಗೆ ಮಾಧ್ಯಮಗಳ ವಿರುದ್ಧವೂ ಮಾನನಷ್ಟ ಕೇಸ್ ದಾಖಲು ಮಾಡುವೆ ಅಂತ ಗುಡುಗಿದ್ದಾರೆ. ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಅಲ್ಲದೆ ರಾಜೀನಾಮೆ ನೀಡಿ ಅಂತಾ ಕಾಂಗ್ರೆಸ್ ಹೈಕಮಾಂಡ್ ಇಲ್ಲಿಯವರೆಗೆ ಹೇಳಿಲ್ಲ. ಘಟನೆ ಸಂಬಂಧ ಸಿಎಂ ಅವರನ್ನು ಭೇಟಿ ಮಾಡಿ ಎಲ್ಲವನ್ನು ವಿವರಿಸುತ್ತೇನೆ ಅಂತಾ ಹೇಳಿದ್ದಾರೆ.
