ಎಲ್ಲಾ ಸರ್ಕಾರಿ ಕಚೇರಿಗಳ ಲಿಫ್ಟ್‌ಗಳಲ್ಲಿ ವಾಸ್ತುದೋಷ ಪರಿಹಾರಕ್ಕೆ ರೇವಣ್ಣ ಆದೇಶ | ತಾಂತ್ರಿಕ ದೋಷದಿಂದ ಕೈಕೊಟ್ಟ ಲಿಫ್ಟ್, ಕಳವಳಗೊಂಡ ರೇವಣ್ಣ  | ಕೂಡಲೇ ವಾಸ್ತುದೋಷ ಪರಿಹರಿಸಲು ಸೂಚನೆ 

ಹಾಸನ (ಅ. 12): ಸಚಿವ ರೇವಣ್ಣ ಅವರು ಹಾಸನದಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾಗ ಲಿಫ್ಟ್‌ ಕೈಕೊಟ್ಟಿದ್ದರಿಂದ ಅಡಚಣೆ ಎದುರಿಸಬೇಕಾಯಿತು. ಆದರೆ, ರೇವಣ್ಣ ಅವರ ಪ್ರಕಾರ ಲಿಫ್ಟ್‌ ಕೆಟ್ಟಿದ್ದಕ್ಕೆ ತಾಂತ್ರಿಕ ದೋಷ ಕಾರಣ ಅಲ್ಲ! 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲಿಫ್ಟ್‌ನಲ್ಲಿ ವಾಸ್ತು ದೋಷ ಇದ್ದಿದ್ದರಿಂದ ಅದು ಕಾರ್ಯನಿರ್ವಹಿಸಲಿಲ್ಲ. ಇದು ಕೇವಲ ಹಾಸನದಲ್ಲಿರುವ ಜಿಲ್ಲಾ ಕಚೇರಿಯ ದೋಷ ಅಲ್ಲ. ವಿಧಾನಸೌಧ ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಇರುವ ಲಿಫ್ಟ್‌ಗಳಲ್ಲಿ ವಾಸ್ತುದೋಷ ಇದೆ. ಹೀಗಾಗಿ ಪ್ರತಿ ಜಿಲ್ಲೆಯಲ್ಲೂ ಒಳ್ಳೆಯ ಪುರೋಹಿತರನ್ನು ಕರೆಸಿ ವಾಸ್ತುದೋಷವನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ರೇವಣ್ಣ ಸೂಚಿಸಿದ್ದಾರೆ. ಸಾಧ್ಯವಾದರೆ ಲಿಫ್ಟ್‌ ಅನ್ನು ಆಗ್ನೇಯ ಮೂಲೆಯಲ್ಲಿ ಹೊಸದಾಗಿ ನಿರ್ಮಿಸುವಂತೆ ಸಲಹೆ ನೀಡಿದ್ದಾರೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.