ಕಂದಾಯ ಸಚಿವರೇ, ನಿಮಗಿದು ಸುವರ್ಣನ್ಯೂಸ್ ಸವಾಲ್. ಗೋವುಗಳು ಸತ್ತಿರುವುದು ಹಳೇ ದೃಶ್ಯ ಎಂದು ನಿಮಗೆ ಹೇಳಿದವರ್ಯಾರು? ನೈಜ ಸತ್ಯ ತೋರಿಸಿದ್ದಕ್ಕೆ ನಿಮಗೆ ಮುಜುಗರ ಉಂಟಾಯ್ತಾ? ಗೋವುಗಳ ಗೋಳು ಸರ್ಕಾರಕ್ಕೆ ತೋರಿಸಿದ್ದೇ ತಪ್ಪಾಯ್ತಾ? ಕಂದಾಯ ಇಲಾಖೆಯ ಹಗರಣ ಬಯಲು ಮಾಡಿದ್ದೇ ತಪ್ಪಾ?
ಬೆಂಗಳೂರು (ಮಾ.14): ರಾಜ್ಯಾದ್ಯಂತ ಮೇವು ಇಲ್ಲದೆ ಗೋವಿನ ಮಾರಣಹೋಮ ನಡೆಯುತ್ತಿರುವ ಬಗ್ಗೆ ಸುವರ್ಣ ನ್ಯೂಸ್ ಮಾಡಿರುವ ವರದಿಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಉಡಾಫೆ ಉತ್ತರ ನೀಡಿದ್ದಾರೆ.
ಎಲ್ಲೂ ಕೂಡ ಗೋವುಗಳು ಸತ್ತಿಲ್ಲ, ಸುಳ್ಳು ಮಾಹಿತಿ, ಹಳೆಯ ದೃಶ್ಯಗಳನ್ನು ತೋರಿಸಿ ಗೋವುಗಳ ಸಾವು ಅಂದರೆ ಆಗುತ್ತಾ? ಎಂದು ಕಾಗೋಡು ಪ್ರಶ್ನಿಸಿದ್ದಾರೆ.
ಸಚಿವರಿಗೆ ಸುವರ್ಣ ನ್ಯೂಸ್ ಸವಾಲು:
ಕಂದಾಯ ಸಚಿವರೇ, ನಿಮಗಿದು ಸುವರ್ಣನ್ಯೂಸ್ ಸವಾಲ್. ಗೋವುಗಳು ಸತ್ತಿರುವುದು ಹಳೇ ದೃಶ್ಯ ಎಂದು ನಿಮಗೆ ಹೇಳಿದವರ್ಯಾರು? ನೈಜ ಸತ್ಯ ತೋರಿಸಿದ್ದಕ್ಕೆ ನಿಮಗೆ ಮುಜುಗರ ಉಂಟಾಯ್ತಾ? ಗೋವುಗಳ ಗೋಳು ಸರ್ಕಾರಕ್ಕೆ ತೋರಿಸಿದ್ದೇ ತಪ್ಪಾಯ್ತಾ? ಕಂದಾಯ ಇಲಾಖೆಯ ಹಗರಣ ಬಯಲು ಮಾಡಿದ್ದೇ ತಪ್ಪಾ?
ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಸುವರ್ಣನ್ಯೂಸ್ ತಂಡವು ಗೋವುಗಳ ಗೋಳಿನ ಬಗ್ಗೆ ಪ್ರತ್ಯಕ್ಷ ವರದಿ ಮಾಡಿದೆ. ಮಾರ್ಚ್ 7ರಂದು ಗೋವುಗಳ ಗೋಳಿನ ಬಗ್ಗೆ ಚಿತ್ರೀಕರಿಸಿದ್ದೇವೆ. ನಮ್ಮ ಜೊತೆ ಬನ್ನಿ, ಸಾಕ್ಷಾತ್ ದರ್ಶನ ಮಾಡಿಸುತ್ತೇವೆ. ಮಾಹಿತಿ ಇಲ್ಲದೇ ಮಾತನಾಡುವುದು ಸರೀನಾ ಸಚಿವರೇ?