ಕಳೆದ ಕೆಲ ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆ ಅಕ್ಷರಶಃ ಕೋಮು ಸಂಘರ್ಷಕ್ಕೆ ಹೊತ್ತಿ ಉರಿದಿತ್ತು.
ಮಂಗಳೂರು (ಡಿ.12): ಕಳೆದ ಕೆಲ ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆ ಅಕ್ಷರಶಃ ಕೋಮು ಸಂಘರ್ಷಕ್ಕೆ ಹೊತ್ತಿ ಉರಿದಿತ್ತು.
ಬಂಟ್ವಾಳ, ಕಲ್ಲಡ್ಕ ಪ್ರದೇಶಗಳಲ್ಲಿ ಹಿಂಸೆ ಭುಗಿಲೆದ್ದ ಪರಿಣಾಮ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ 52 ದಿನಗಳ ಕಾಲ ನಿಷೇಧಾಜ್ಞೆ ವಿಧಿಸಲಾಗಿತ್ತು. ಇದೀಗ ಇಡೀ ಜಿಲ್ಲೆಯಲ್ಲಿ ಶಾಂತಿ ನೆಲೆಸಿದ್ದು, ಜನ ಜೀವನ ಸಹಜ ಸ್ಥಿತಿಯಲ್ಲಿದೆ. ಹೀಗಿರುವಾಗಲೇ ಕರಾವಳಿಯಲ್ಲಿ ಶಾಂತಿ ನೆಲೆಸಲಿ ಅನ್ನೋ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಅವರು, ಸಾಮರಸ್ಯದ ಹೆಸ್ರಲ್ಲಿ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಇಂದು ಪಾದಯಾತ್ರೆ ಮಾಡಲಿದ್ದಾರೆ. ಅದರಂತೆ ಇಂದು ಬೆಳಿಗ್ಗೆ 9 ಗಂಟೆಗೆ ಬಂಟ್ವಾಳ ತಾಲೂಕಿನ ಪರಂಗಿಪೇಟೆಯಲ್ಲಿ ಸಾಮರಸ್ಯ ನಡಿಗೆಗೆ ಚಾಲನೆ ಸಿಗಲಿದೆ. ಅಲ್ಲಿಂದ ನಡಿಗೆ ಕೋಮು ಸೂಕ್ಷ್ಮ ಪ್ರದೇಶಗಳಾದ ಮಾರಿಪಳ್ಳ, ಕೈಕಂಬ, ಬಿ.ಸಿ.ರೋಡ್, ಬಂಟ್ವಾಳ, ಕಲ್ಲಡ್ಕ ಮೂಲಕ ಸುಮಾರು 25 ಕಿ.ಮೀ ಸಾಗಿ ಮಾಣಿಯಲ್ಲಿ ಸಂಜೆ ಸಮಾರೋಪಗೊಳ್ಳಲಿದೆ. ಇನ್ನು ಈ ಯಾತ್ರೆಯನ್ನು ಬಹುಭಾಷಾ ನಟ ಪ್ರಕಾಶ್ ರೈ ಉದ್ಘಾಟಿಸಲಿದ್ದಾರೆ.
