ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ ಮೃತಪಟ್ಟ ನಟ ಅನಿಲ್ ನಿವಾಸಕ್ಕೆ ಆರ್. ಅಶೋಕ್ ಭೇಟಿ ನೀಡಿ ಸಾಂತ್ವನ ಹೇಳಿದರು.
ಬೆಂಗಳೂರು (ನ.08): ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ ಮೃತಪಟ್ಟ ನಟ ಅನಿಲ್ ನಿವಾಸಕ್ಕೆ ಆರ್. ಅಶೋಕ್ ಭೇಟಿ ನೀಡಿ ಸಾಂತ್ವನ ಹೇಳಿದರು.
ಬಿಡಬ್ಲೂಎಸ್’ಎಸ್’ಬಿನವರು ಪಮಿ೯ಷನ್ ಕೊಡುವ ಮುಂಚೆ ಯೋಚನೆ ಮಾಡಬೇಕಿತ್ತು. ಪಮಿ೯ಷನ್ ಕೊಟ್ಟಮೇಲೆ ಯಾರಾದರು ಅವರ ಕಡೆಯಿಂದ ಹೋಗಬಹುದಿತ್ತು. ಕಳೆದ 15 ವಷ೯ಗಳಿಂದ ಅಲ್ಲಿನ ನೀರನ್ನ ಬಳಸುತ್ತಿಲ್ಲ. ಸೂಕ್ತ ಮುಂಜಾಗ್ರತಾ
ಕ್ರಮಗಳನ್ನು ಕೈಗೊಳ್ಳಬೇಕಿತ್ತು ಎಂದರು.
ಮೃತದೇಹಗಳ ಶೋಧ ಕಾರ್ಯಕ್ಕೆ ಕಾರವಾರದಿಂದ ನುರಿತ ತಜ್ಞ ರ ತಂಡ ಬರುತ್ತಿದೆ. ಅವರು ಸಮುದ್ರದಲ್ಲಿ ಈಜುವಂತಹ ಸಾಮರ್ಥ್ಯವಿರುವವರು. ಶೀಘ್ರದಲ್ಲಿಯೇ ದೇಹಗಳನ್ನು ಪತ್ತೆ ಹಚ್ಚಲಿದ್ದಾರೆ ಎಂದರು.
ಈಗ ಆಪಾದನೆ ಮಾಡಿದರೆ ಹೋದ ಜೀವ ಮತ್ತೆ ಬರಲ್ಲ.ಮುಂದಿನ ದಿನಗಳಲ್ಲಿ ಹೀಗೆ ಅಹಿತಕರ ಘಟನೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ನಾನು ರಾಮನಗರ ಎಸ್ ಪಿ ಜೊತೆ ಮಾತನಾಡಿದ್ದೇನೆ ಎಂದು ಅನಿಲ್ ಕುಟುಂಬದ
ಭೇಟಿ ಬಳಿಕ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ.
