ಬೆಳಗಾವಿ[ಜೂ. 01] ಕಾಂಗ್ರೆಸ್ ಪಕ್ಷದ ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಈಗಾಗಲೆ ಲಕ್ಷ್ಮಣ ರೇಖೆ ದಾಟಿದ್ದಾರೆ. ಅವರ ಮನವೊಲಿಸುವ ಪ್ರಯತ್ನ ಬಗ್ಗೆ ಪಕ್ಷ ನಿರ್ಧರಿಸುತ್ತದೆ, ಎಲ್ಲದಕ್ಕೂ ಒಂದು ಇತಿಮಿತಿ ಇರುತ್ತದೆ. ಒಂದೊಂದು ಸಲ ಲಕ್ಷ್ಮಣ ರೇಖೆ ದಾಟಿದಾಗ ಪಕ್ಷ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಗೃಹ ಸಚಿವ ಎಂ.ಬಿ ಪಾಟೀಲ್  ಹೇಳಿದ್ದಾರೆ.

ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿ, ಸಚಿವ ಸಂಪುಟ ವಿಸ್ತರಣೆ ಮಾಡುವುದರ ಬಗ್ಗೆ ಯಾವುದೇ ನಿರ್ಣಯವಾಗಿಲ್ಲ. ಕಾಂಗ್ರೆಸ್ಸಿನ ಅತೃಪ್ತ ಶಾಸಕರನ್ನು ಸಿಎಂ ಮನವೊಲಿಸುವ ಕೆಲಸದಲ್ಲಿ ತಪ್ಪಿಲ್ಲ ಎಂದು ಹೇಳಿದರು.

‘ಕಾಂಗ್ರೆಸ್‌ ಬಿಟ್ಟು ಬಿಜೆಪಿ ಹೋಗೋ ಪ್ರಶ್ನೆಯೇ ಇಲ್ಲ’

ಸಂಪುಟ ವಿಸ್ತರಣೆ ಮಾಡುವ ವಿಚಾರ ಹೈಕಮಾಂಡ್​ಗೆ ಬಿಟ್ಟಿದ್ದು ಈ ಬಗ್ಗೆ ಸಿದ್ದರಾಮಯ್ಯ, ದೇವೇಗೌಡ ಎಲ್ಲರೂ ಸೇರಿ ನಿರ್ಣಯ ತೆಗೆದುಕೊಳ್ಳತ್ತಾರೆ ಇದರ ಬಗ್ಗೆ ಈಗಾಗಲೇ ರಾಜ್ಯ ಕಾಂಗ್ರೆಸ್​​ ಉಸ್ತುವರಿ ಕೆ.ಸಿ ವೇಣುಗೋಪಾಲ ಅವರು ಸಭೆ ನಡೆಸಿದ್ದಾರೆ ಪಕ್ಷದ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

ನಮ್ಮ ಸರ್ಕಾರ ಐದು ವರ್ಷಗಳ ಕಾಲ ಸುಗಮವಾಗಿ ನಡೆಯಲಿದೆ. ಈ ಹಿಂದೆ ದೀಪಾವಳಿ, ಯುಗಾದಿ, ಅಧಿವೇಶನ ಆಯ್ತು. ಅಮಾವ್ಯಾಸೆ ಆಯ್ತು, ಹುಣ್ಣಿಮೆ ಆಯ್ತು. ಲೋಕಸಭೆ ಚುನಾವಣೆ ಆಯ್ತು. ಮೇ 23 ಆಯ್ತು ಈಗ ಜೂನ್ 1 ಆಯ್ತು ಎಂದು ಬಿಜೆಪಿ ಗಡುವು ನೀಡುವ ವಿಚಾರವನ್ನು ಲೇವಡಿ ಮಾಡಿದರು.