ಬಾಗಲಕೋಟೆ, (ಆ.22):  ನೂತನ ಸಚಿವ ಕೆ.ಎಸ್.ಈಶ್ವರಪ್ಪ ಅವರು ಇಂದು (ಗುರುವಾರ) ಬಾಗಲಕೋಟೆ ಜಿಲ್ಲೆಯಲ್ಲಿ ನೆರೆ ಪೀಡಿತ ಪ್ರದಶಗಳಿಗೆ ಭೇಟಿ ನೀಡಿ ಸಂಭವಿಸಿದ ಅನಾಹುತಗಳನ್ನು ವೀಕ್ಷಿಸಿದರು. 

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ್ ಕತ್ತಿ ಸಿದ್ದರಾಮಯ್ಯಗೆ ಫೋನ್ ಕರೆ ಮಾಡಿ ಭೇಟಿಯಾಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೆಳಿಗ್ಗೆ ನನ್ನೊಂದಿಗೆ ಉಮೇಶ್ ಕತ್ತಿ ಫೋನ್ ನಲ್ಲಿ ಮಾತನಾಡಿದ್ದು, ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ನನಗೆ ಹೇಳಿದ್ದಾರೆ. ನಾಳೆ ನನಗೆ ಬೆಂಗಳೂರಿನಲ್ಲಿ ಸಿಗ್ತೀನಿ ಎಂದಿದ್ದು, ಯಾವುದೇ ಊಹಾಪೋಹಕ್ಕೆ ಬೆಲೆ ಕೊಡಬೇಡಿ ಎಂದು ಸ್ಪಷ್ಟಪಡಿಸಿದರು.

JDS ಸೇರುವಂತೆ ಬಿಜೆಪಿ ಅಸಮಾಧಾನಿತ ಶಾಸಕನಿಗೆ ಆಹ್ವಾನ: ಆಪರೇಷನ್ ಶುರು?

"

ಈ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಸಹ ನಿರಾಶ್ರಿತರಾಗಿದ್ದಾರೆಂದು ವಿವಾದಾತ್ಮಕ ಹೇಳಿಕೆ ನೀಡಿದರು. 17-18 ಜನ ಯಾಕೆ ಕಾಂಗ್ರೆಸ್ ಬಿಟ್ಟು ಹೋದ್ರು ಎನ್ನುವುದನ್ನು ಯೋಚನೆ ಮಾಡಲಿ ಎಂದರು.ಕಾಂಗ್ರೆಸ್ ನಾಯಕರಿಗೆ ಟೀಕೆ ಮಾಡೋದೊಂದೆ ಗೊತ್ತು. ಕಾಂಗ್ರೆಸ್ ಪರಿಸ್ಥಿತಿ ವಿಪಕ್ಷ ನಾಯಕರನ್ನ ಮಾಡೋದಲ್ಲ, ರಾಷ್ಟ್ರೀಯ ಅಧ್ಯ ಕ್ಷರನ್ನ ಮಾಡೋಕೆ ಆಗುತ್ತಿಲ್ಲ. ಎಲ್ಲಿದೆ ಕಾಂಗ್ರೆಸ್ ಅನ್ನೋ ಪರಿಸ್ಥಿತಿ ಬಂದಿದೆ ಎಂದು ವ್ಯಗ್ಯವಾಡಿದರು.

"

ಮತ್ತೊಂದೆಡೆ ಉಮೇಶ್ ಕತ್ತಿ ಅವರನ್ನು ಜೆಡಿಎಸ್ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಭೇಟಿ ಮಾಡಿ, ಪಕ್ಷಕ್ಕೆ ಆಹ್ವಾನಿಸಿರುವುದನ್ನು ಇಲ್ಲಿ ಸ್ಮರಿಸಬಹದು.